ನಾಟು ನಾಟು ಹಾಡಿನ ಟ್ಯೂನ್​ಗೆ ನೃತ್ಯ ಮಾಡಿದ ನಟ ರಾಮ್ ಚರಣ್​ : ವಿಡಿಯೋ

🎬 Watch Now: Feature Video

thumbnail

By

Published : May 22, 2023, 9:21 PM IST

ಜಮ್ಮು ಮತ್ತು ಕಾಶ್ಮೀರ : ಕಾಶ್ಮೀರ ಕಣಿವೆಯಲ್ಲಿ ನಡೆದ ಮೂರನೇ ಜಿ 20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಮೀಟಿಂಗ್‌ನ ಸೈಡ್ ಈವೆಂಟ್‌ನಲ್ಲಿ ಭಾಗವಹಿಸಿದ ನಟ ರಾಮ್ ಚರಣ್, ತಮ್ಮ 'ಆರ್‌ಆರ್‌ಆರ್' ಚಲನಚಿತ್ರದ 'ನಾಟು ನಾಟು' ಗೆ ನೃತ್ಯ ಮಾಡುತ್ತಾ, ವಿದೇಶಿ ಪ್ರತಿನಿಧಿಗಳಿಗೆ ಡ್ಯಾನ್ಸ್​ ಕಲಿಸಿದರು.

ಬಿಳಿಯ ಸಾಂಪ್ರದಾಯಿಕ ಉಡುಪು ಧರಿಸಿದ್ದ ರಾಮ್ ಚರಣ್, ಕೊರಿಯಾದ ರಾಯಭಾರಿ ಚಾಂಗ್ ಜೇ-ಬಾಕ್ ಅವರಿಗೆ 'ನಾಟು ನಾಟು' ಹುಕ್-ಸ್ಟೆಪ್ ಅನ್ನು ಕಲಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಶ್ಮೀರವು ಅತ್ಯಂತ ಸುಂದರವಾದ ಸ್ಥಳವಾಗಿದೆ. ನಾನು 1986 ರಿಂದ ಇಲ್ಲಿಗೆ ಬರುತ್ತಿದ್ದೇನೆ. ನನ್ನ ತಂದೆ ಇಲ್ಲಿ ಗುಲ್ಮಾರ್ಗ್ ಮತ್ತು ಸೋನಾಮಾರ್ಗ್‌ನಲ್ಲಿ ವ್ಯಾಪಕವಾಗಿ ಚಿತ್ರೀಕರಣ ಮಾಡಿದ್ದಾರೆ. ನಾನು 2016 ರಲ್ಲಿ ಈ ಆಡಿಟೋರಿಯಂನಲ್ಲಿ ಚಿತ್ರೀಕರಣ ಮಾಡಿದ್ದೇನೆ. ಈ ಸ್ಥಳದಲ್ಲಿ ಏನೋ ಮಾಂತ್ರಿಕತೆ ಇದೆ. ಇದು ಕಾಶ್ಮೀರಕ್ಕೆ ಬರುತ್ತಿರುವ ಅತಿವಾಸ್ತವಿಕ ಭಾವನೆ. ಇದು ಎಲ್ಲರ ಗಮನ ಸೆಳೆಯುತ್ತದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದ ನಂತರ ಎಎನ್‌ಐ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮಾತನಾಡಿದ ಅವರು, ನಾವು ಕಾಶ್ಮೀರವನ್ನು ಪ್ರೀತಿಸುತ್ತೇವೆ. ಅದೊಂದು ಸುಂದರ ತಾಣ. ಜಿ 20 ಸಭೆಯನ್ನು ನಡೆಸಲು ಈ ಸ್ಥಳ ಆಯ್ಕೆ ಮಾಡಿರುವುದು ಉತ್ತಮವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:  ಶ್ರೀನಗರದಲ್ಲಿ ಜಿ 20 ಶೃಂಗಸಭೆ: ಪ್ರತಿನಿಧಿಗಳಿಗೆ ಆತ್ಮೀಯ ಸ್ವಾಗತ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.