ನಟ ಶರತ್​ಬಾಬು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ರಜನಿಕಾಂತ್ - ನಟ ಶರತ್​ಬಾಬು ನಿಧನ

🎬 Watch Now: Feature Video

thumbnail

By

Published : May 23, 2023, 1:46 PM IST

ತಮಿಳುನಾಡು: ಕನ್ನಡದ 'ಅಮೃತವರ್ಷಿಣಿ' ಸಿನಿಮಾ ಸೇರಿದಂತೆ ಬಹುಭಾಷೆಗಳಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟ ಶರತ್​ಬಾಬು (71) ದೀರ್ಘಕಾಲದ ಅನಾರೋಗ್ಯದಿಂದ ಹೈದರಾಬಾದ್​ನಲ್ಲಿ ಸೋಮವಾರ ನಿಧನರಾಗಿದ್ದರು. ಪಾರ್ಥಿವ ಶರೀರವನ್ನು ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ರವಾನಿಸಲಾಗಿದ್ದು, ಇಂದು ಕುಟುಂಬಸ್ಥರು, ಅಭಿಮಾನಿಗಳು ಹಾಗು ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಹಿರಿಯ ನಟ ರಜನಿಕಾಂತ್ ಅವರು ಅಗಲಿದ ಹಿರಿಯ ನಟನಿಗೆ ಅಂತಿಮ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಟ್ವೀಟ್​ ಮಾಡಿರುವ ಅವರು, "ನಾನು ನನ್ನ ಆತ್ಮೀಯ ಗೆಳೆಯ ಮತ್ತು ಅದ್ಬುತ ವ್ಯಕ್ತಿ ಶರತ್ ಬಾಬು ಅವರನ್ನು ಕಳೆದುಕೊಂಡೆ. ಇದು ತುಂಬಲಾರದ ನಷ್ಟ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಸಂತಾಪ ಸೂಚಿಸಿದ್ದಾರೆ.

ಅಮೃತವರ್ಷಿಣಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಬಹುಭಾಷಾ ನಟಿ ಸುಹಾಸಿನಿ ಕೂಡಾ ಶರತ್ ಬಾಬು ಅಗಲಿಕೆ ಕಂಬನಿ ಮಿಡಿದಿದ್ದಾರೆ. "ಆತ್ಮೀಯ ಸಹೋದರ ಶರತ್ ಬಾಬು ಅವರನ್ನು ಕಳೆದುಕೊಂಡಿದ್ದೇವೆ. ಒಬ್ಬ ಮನುಷ್ಯನಾಗಿ ಅವರ ಶ್ರೇಷ್ಠತೆ ಮತ್ತು ನಟನಾಗಿ ಸೌಮ್ಯತೆಯನ್ನು ನೆನಪಿಸಿಕೊಳ್ಳುವ ಸಮಯವಿದು. ನಾನು ರತ್ನವನ್ನು ಕಳೆದುಕೊಂಡೆ" ಎಂದು ಟ್ವೀಟ್​ ಮಾಡಿದ್ದಾರೆ. 

ಇದನ್ನೂ ಓದಿ: 'ಅಮೃತವರ್ಷಿಣಿ' ಖ್ಯಾತಿಯ ಹಿರಿಯ ನಟ ಶರತ್​ಬಾಬು ಅನಾರೋಗ್ಯದಿಂದ ನಿಧನ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.