ಟ್ರ್ಯಾಕ್ಟರ್​ನಲ್ಲಿ ಸ್ಟಂಟ್: ಚಕ್ರದಡಿ ಸಿಲುಕಿ ಯುವಕ ಸಾವು - tractor overturned

🎬 Watch Now: Feature Video

thumbnail

By ETV Bharat Karnataka Team

Published : Jan 1, 2024, 2:06 PM IST

ಸಂಭಾಲ್(ಉತ್ತರ ಪ್ರದೇಶ): ಸಂಭಾಲ್ ನಗರದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ಟ್ರ್ಯಾಕ್ಟರ್​ನಲ್ಲಿ ಸ್ಟಂಟ್​ ಮಾಡಲು ಹೋಗಿ ಸಾವನ್ನಪ್ಪಿರುವ  ಘಟನೆ ಭಾನುವಾರ ಸಂಜೆ ನಡೆಯಿತು. ಘಟನೆಯ ದೃಶ್ಯ ಮೊಬೈಲ್​ ಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವಕನ ತಲೆ ಮೇಲೆಯೇ ಟ್ರ್ಯಾಕ್ಟರ್​ ಚಕ್ರ ಬಿದ್ದು, ಸ್ಥಳದಲ್ಲಿಯೇ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ. ಮೃತನನ್ನು ಮೊಹಲ್ಲಾ ನಖಾಸಾ ನಿವಾಸಿ ಹಾಜಿ ಛಿದ್ದಾ ಎಂಬವರ ಪುತ್ರ 25 ವರ್ಷದ ಜಾಕೀರ್ ಎಂದು ಗುರುತಿಸಲಾಗಿದೆ.

ವಿಡಿಯೋದಲ್ಲಿ ಯುವಕ ರಸ್ತೆಮಧ್ಯೆ ಟ್ರ್ಯಾಕ್ಟರ್​ ಅನ್ನು ವೇಗದಲ್ಲಿ ತಿರುಗಿಸುತ್ತಿರುವುದನ್ನು ನೋಡಬಹುದು. ಈ ವೇಳೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟ್ರ್ಯಾಕ್ಟರ್‌ ಸಂಪೂರ್ಣ ಮಗುಚುವ ಮೊದಲೇ ಆತ ರಸ್ತೆಗೆ ಬಿದ್ದಿದ್ದಾನೆ. ಹೀಗಾಗಿ ಚಕ್ರದಡಿಯಲ್ಲಿ ಸಿಲುಕಿ ಸಾವನ್ನಪ್ಪಿರುವುದನ್ನು ಗಮನಿಸಬಹುದು. ತಕ್ಷಣವೇ ಅಲ್ಲಿದ್ದ ಸ್ಥಳೀಯರು ಟ್ರ್ಯಾಕ್ಟರ್​ ಅನ್ನು ಮೇಲಕ್ಕೆತ್ತಿ ಜಾಕೀರ್‌ನ​ನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು.

ಭಾನುವಾರ ಸಂಜೆ ತನ್ನ ಜಮೀನಿನಿಂದ ಟ್ರ್ಯಾಕ್ಟರ್‌ನೊಂದಿಗೆ ಮನೆಗೆ ಮರಳುತ್ತಿದ್ದು, ರಸ್ತೆ ಮಧ್ಯೆ ಸಾಹಸ ಮಾಡಲು ಹೋಗಿ ಈ ದುರ್ಘಟನೆ ಸಂಭವಿಸಿದೆ ಎಂದು ನಖಾಸಾ ಪೊಲೀಸ್ ಠಾಣೆ ಪ್ರಭಾರಿ ಗಜೇಂದ್ರ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ: 7 ವರ್ಷದ ಮಗಳನ್ನು ಬೆಂಕಿಗೆ ಎಸೆದ ತಂದೆ!

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.