ಇಂಗಾಲದ ದುಷ್ಪರಿಣಾಮಗಳ ಕುರಿತು ಜಾಗೃತಿ: ಸೈಕಲ್ ಏರಿ 12 ದೇಶಗಳಿಗೆ ಪ್ರಯಾಣ ಆರಂಭಿಸಿದ ಯುವಕ - ಇಂಗಾಲ ಹೊರಸೂಸುವಿಕೆ
🎬 Watch Now: Feature Video
ಆಂಧ್ರಪ್ರದೇಶ : ಇಂಗಾಲ (ಕಾರ್ಬನ್) ಹೊರಸೂಸುವಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಯುವಕನೊಬ್ಬ ಸೈಕಲ್ ಪ್ರಯಾಣ ಆರಂಭಿಸಿದ್ದಾನೆ. ಸೈಕಲ್ ಏರಿ ಒಂದಲ್ಲ, ಎರಡಲ್ಲ ಬರೋಬ್ಬರಿ 12 ದೇಶಗಳಿಗೆ ಭೇಟಿ ನೀಡಲು ತಮಿಳುನಾಡಿನಿಂದ ಸಂಚಾರ ಪ್ರಾರಂಭಿಸಿದ್ದಾನೆ.
ತಮಿಳುನಾಡಿನ ಕನ್ಯಾಕುಮಾರಿ ಮೂಲದ ಶ್ರೀ ನಭನ್ (22) ಎಂಬುವರು ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ವ್ಯಾಸಂಗ ಮಾಡಿದ್ದು, ಮುಂಬೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿ ಹೊಂದಿರುವ ನಭನ್ ಪರಿಸರ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಇಂಗಾಲದ ಹೊರಸೂಸುವಿಕೆಯಿಂದಾಗಿ ಪರಿಸರವು ಗಂಭೀರವಾಗಿ ಹಾನಿಗೊಳಗಾಗುತ್ತದೆ. ಜಾಗತಿಕ ತಾಪಮಾನ ಏರಿಕೆಯು ನೀರಿನ ಅಣುಗಳು ಪರಿಣಾಮ ಬೀರುತ್ತವೆ. ಇದರಿಂದಾಗುವ ಹಾನಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಯುವಕ ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ಪ್ರಯಾಣದ ವೇಳೆ ಹಳ್ಳಿ- ಪಟ್ಟಣಗಳಲ್ಲಿ ವಿದ್ಯಾರ್ಥಿಗಳು, ಸ್ಥಳೀಯರು, ಸಾಮಾಜಿಕ, ಪರಿಸರವಾದಿಗಳನ್ನು ಭೇಟಿ ಮಾಡಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ವಿಶ್ವ ಸೈಕಲ್ ದಿನಾಚರಣೆ ಜೂನ್ 3 ರಿಂದ ಕನ್ಯಾಕುಮಾರಿಯಿಂದ ಯಾತ್ರೆ ಆರಂಭವಾಗಿದೆ. ಅವರು ಭಾರತ, ನೇಪಾಳ, ಭೂತಾನ್, ಚೀನಾ, ಮ್ಯಾನ್ಮಾರ್, ಸಿಂಗಾಪುರ್, ಹಾಂಗ್ ಕಾಂಗ್, ಮಲೇಷ್ಯಾ, ಥಾಯ್ಲೆಂಡ್, ಕಾಂಬೋಡಿಯಾ, ಲಾವೋಸ್ ಮತ್ತು ವಿಯೆಟ್ನಾಂ ಮೂಲಕ ದಕ್ಷಿಣ ಕೊರಿಯಾವನ್ನು ತಲುಪಲಿದ್ದಾರೆ. ಒಟ್ಟು 72 ಸಾವಿರ ಕಿಲೋಮೀಟರ್ ಪ್ರವಾಸ ಮಾಡುತ್ತಿದ್ದಾರೆ. ಹಡಗಿನ ಮೂಲಕ ದಕ್ಷಿಣ ಕೊರಿಯಾ ತಲುಪಲಿದ್ದು, ಅಲ್ಲಿಂದ ಸೈಕಲ್ ಮೂಲಕ ಬೇರೆ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಅದಕ್ಕೆ ಬೇಕಾದ ವೀಸಾಗಳನ್ನೂ ಸಿದ್ಧಪಡಿಸಿಕೊಂಡಿದ್ದಾರೆ. ದಿನಕ್ಕೆ 100 ರಿಂದ 200 ಕಿ.ಮೀ. ಸಂಚರಿಸುತ್ತಿದ್ದು, ಸೂಕ್ತವಾದ ಪ್ರದೇಶದಲ್ಲಿ ತಂಗುವುದಾಗಿ ತಿಳಿಸಿದ್ದಾರೆ.
ಇನ್ನು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್ ಮೂಲಕ ಹಾದು ಹೋಗುತ್ತಿರುವಾಗ ಸಂತನೂತಲಪಾಡು ಮಂಡಲದ ರುದ್ರಾವರಂ ಗ್ರಾಮದಲ್ಲಿ ತಮ್ಮ ಇನ್‌ಸ್ಟಾಗ್ರಾಂ ಸ್ನೇಹಿತ ಹಾಗೂ ಸೈಕಲ್ ಪ್ರಯಾಣಿಕ ಸುಭಾಷ್ ಚಂದ್ರ ಬೋಸ್ ಅವರ ಮನೆಯಲ್ಲಿ ನಿನ್ನೆ ತಂಗಿದ್ದರು. ಈ ವೇಳೆ ಸುಭಾಷ್ ಗೆಳಯನ ಪ್ರಯಾಣಕ್ಕೆ ಶುಭ ಕೋರಿದರು.
ಇದನ್ನೂ ಓದಿ : ಏಷ್ಯಾದ ಅತಿ ಉದ್ದದ ಸೈಕಲ್ ರೇಸ್ಗೆ ಚಾಲನೆ : ಕಾಶ್ಮೀರದಿಂದ ಸ್ಪರ್ಧೆ ಆರಂಭ