ರಣಾಂಗಣವಾದ ದೆಹಲಿ ಮಹಾನಗರ ಪಾಲಿಕೆ.. ಮೇಯರ್ ಆಯ್ಕೆ ಚುನಾವಣೆ ಮತ್ತೆ ಮುಂದೂಡಿಕೆ - ದೆಹಲಿ ಮುನ್ಸಿಪಲ್ ಕಾರ್ಪೊರೇಷನ್
🎬 Watch Now: Feature Video
ದೆಹಲಿ: ದೆಹಲಿ ಮಹಾನಗರ ಪಾಲಿಕೆಯ ಸಿವಿಕ್ ಸೆಂಟರ್ನಲ್ಲಿ ಇಂದು ಮೇಯರ್ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮತದಾನ ಆರಂಭವಾಗುತ್ತಿದ್ದಂತೆ ಉಭಯ ಪಕ್ಷಗಳ ನಡುವೆ ಸದನದಲ್ಲಿ ಗದ್ದಲ ಉಂಟಾದ ಕಾರಣ ಚುನಾವಣೆಯನ್ನು ಮುಂದೂಡಲಾಗಿದೆ. ಮತ್ತೊಮ್ಮೆ ಮೇಯರ್ ಆಯ್ಕೆಗೆ ಬ್ರೇಕ್ ಬಿದ್ದಿದೆ. ಮೇಯರ್ ಸ್ಥಾನಕ್ಕೆ ಹೊಸ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜ.6ರಂದು ನಡೆದಿತ್ತು. ಈ ವೇಳೆ ಆಪ್ ಮತ್ತು ಬಿಜೆಪಿ ಕೌನ್ಸಿಲರ್ಗಳ ನಡುವೆ ವಾಗ್ವಾದ ಉಂಟಾಗಿ ನೂಕಾಟ, ತಳ್ಳಾಟ ನಡೆದಿತ್ತು. ಈ ಹಿನ್ನೆಲೆ ಆಯ್ಕೆ ಪ್ರಕ್ರಿಯೆಯನ್ನು ಜ.24(ಮಂಗಳವಾರ)ಕ್ಕೆ ಮುಂದೂಡಲಾಗಿತ್ತು.
ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ 134 ಸ್ಥಾನಗಳನ್ನು ಗೆದ್ದಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಮೇಯರ್ ಸ್ಥಾನಕ್ಕೆ ಶೆಲ್ಲಿ ಒಬೆರಾಯ್ ಅವರನ್ನು ಕಣಕ್ಕಿಳಿಸಿದೆ. ಇನ್ನು, ಬಿಜೆಪಿ ಮೂರು ಅವಧಿಯ ಕೌನ್ಸಿಲರ್ ರೇಖಾ ಗುಪ್ತಾ ಅವರನ್ನು ಮೇಯರ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದೆ. ಉಪಮೇಯರ್ ಸ್ಥಾನಕ್ಕೆ ಆಪ್ ಪಕ್ಷ ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿ ರಾಮ್ ನಗರ ಕೌನ್ಸಿಲರ್ ಕಮಲ್ ಬಾಗ್ರಿ ಅವರನ್ನು ಕಣಕ್ಕಿಳಿಸಿದೆ.
ಇದನ್ನೂ ಓದಿ: ದೆಹಲಿ ಪಾಲಿಕೆಯಲ್ಲಿ ಭಾರಿ ಕೋಲಾಹಲ: ಬಿಜೆಪಿ - ಆಪ್ ಸದಸ್ಯರಿಂದ ರಣಾಂಗಣವೇ ಸೃಷ್ಟಿ-