ಧಾರವಾಡ: ಅಟ್ಟಾಡಿಸಿಕೊಂಡು ಬಂದು ಬಾಲಕಿ ಕಾಲಿಗೆ ಕಚ್ಚಿದ ಕೋತಿ - Video - a monkey attacked on girl
🎬 Watch Now: Feature Video
ಧಾರವಾಡ : ಕೋತಿಯೊಂದು ಬಾಲಕಿಯನ್ನು ಅಟ್ಟಾಡಿಸಿಕೊಂಡು ಬಂದು ಕಾಲಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ ಎದುರು ಘಟನೆ ನಡೆದಿದ್ದು, ಇಕರಾ ಗಡಕಾರಿ ಗಾಯಗೊಂಡ ಮಗು.
ವಿದ್ಯಾರ್ಥಿನಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಗುವಿನ ಎಡಗಾಲನ್ನು ಹಿಡಿದು ಕೋತಿ ಎಳೆದಾಡಿದ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಗಾಯಾಳು ಬಾಲಕಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗರಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಇತ್ತೀಚೆಗಷ್ಟೇ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಇಂತಹದ್ದೇ ದೃಶ್ಯ ಕಂಡು ನಡೆದಿತ್ತು. ಜೊತೆಯಲ್ಲಿ ಆಟವಾಡುತ್ತಿದ್ದ ಮಂಗನ ಸಾವಿಗೆ ವ್ಯಕ್ತಿಯೊಬ್ಬರು ಕಾರಣ ಎಂದು ಭಾವಿಸಿ ಕೋತಿಗಳ ಗುಂಪೊಂದು ಔಷಧ ಅಂಗಡಿಯ ಮ್ಯಾನೇಜರ್ ಮೇಲೆ ದಾಳಿ ಮಾಡಿದ್ದವು. ಮಂಗವೊಂದು ನುಗ್ಗಲು ಯತ್ನಿಸಿದಾಗ ಅಂಗಡಿಯ ವ್ಯವಸ್ಥಾಪಕರು ಬಾಗಿಲು ಮುಚ್ಚಿದ್ದು, ಈ ವೇಳೆ ಕೋತಿಯೊಂದು ಅದರಡಿ ಸಿಲುಕಿ ಪ್ರಾಣ ಕಳೆದುಕೊಂಡಿತ್ತು.
ಇದನ್ನೂ ಓದಿ : ಸಹ ಕೋತಿ ಸಾವಿಗೆ ಕಾರಣವೆಂದು ವ್ಯಕ್ತಿ ಮೇಲೆ ಮಂಗಗಳ ದಾಳಿ.. ವಿಡಿಯೋ ವೈರಲ್