ನಾಯಿ ಬೇಟೆಯಾಡಲು ಹೋಗಿ 26 ಗಂಟೆ ಮನೆಯೊಳಗೆ ಸೆರೆಯಾದ ಚಿರತೆ - ವಿಡಿಯೋ - ಜಿಲ್ಲಾ ಅರಣ್ಯಾಧಿಕಾರಿ ಗೌತಮ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/13-11-2023/640-480-20015339-thumbnail-16x9-thanu.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Nov 13, 2023, 8:14 PM IST
ಕೂನೂರು (ತಮಿಳುನಾಡು): ನಾಯಿ ಬೇಟೆಯಾಡಲು ಹೋಗಿ, ಚಿರತೆಯೊಂದು 26 ಗಂಟೆಗಳ ಕಾಲ ಮನೆಯೊಳಗೆ ಸೆರೆಯಾದ ಘಟನೆ ತಮಿಳುನಾಡಿನ ಕೂನೂರಿನಿಂದ ವರದಿಯಾಗಿದೆ. ಮನೆಯ ಮುಂಭಾಗದಲ್ಲಿದ್ದ ಸಾಕು ನಾಯಿಯನ್ನು ಬೇಟೆಯಾಡಲು ಯತ್ನಿಸಿದಾಗ ಶ್ವಾನವು ಮನೆಯ ಒಳಗಡೆ ಓಡಿದೆ. ಚಿರತೆಯು ಅದನ್ನೇ ಹಿಂಬಾಲಿಸಿದ್ದು, ಮನೆಯೊಳಗಡೆ ನುಗ್ಗಿ 26 ಗಂಟೆಗಳ ಕಾಲ ಅಲ್ಲೇ ಅವಿತು ಕುಳಿತಿದ್ದ ಆಶ್ಚರ್ಯಕಾರಿ ಮತ್ತು ಭಯಬೀಳಿಸುವ ಘಟನೆ ಕೂನೂರು ಪಟ್ಟಣದಲ್ಲಿ ನಡೆದಿದೆ.
ಮನೆಯ ಮಾಲೀಕರು ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆಗೆ ಕೂಡಲೇ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿ, ಕಾರ್ಯಾಚರಣೆಯಲ್ಲಿ ತೊಡಗಿದ್ದ ಆರು ಸಿಬ್ಬಂದಿಗಳ ಮೇಲೆಯೂ ಚಿರತೆ ದಾಳಿ ಮಾಡಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾ ಅರಣ್ಯಾಧಿಕಾರಿ ಗೌತಮ್ ಸಲಹೆಯಂತೆ ಸಿಸಿಟಿವಿ ಕ್ಯಾಮರಾ ಅಳವಡಿಸಿ, ಚಿರತೆ ಚಲನವಲವನ್ನು ಗಮನಿಸಲಾಯಿತು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿಗಳ ಕೈಗೆ ಸಿಗದ ಚಿರತೆ ಮನೆಯಿಂದಲೇ ಕಾಡಿಗೆ ವಾಪಾಸ್ ಆಗಿದೆ. ಇದರಿಂದ ಗ್ರಾಮದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ತುಮಕೂರು: ಬಾಲಕಿಯ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ