ಸಮುದ್ರ ತೀರಕ್ಕೆ ಕೊಚ್ಚಿಕೊಂಡು ಬಂದ ಬ್ರಿಟಿಷರ ಕಾಲದ ಬೃಹತ್ ಮರದ ಪೆಟ್ಟಿಗೆ... ಒಡೆದಾಗ ಸಿಕ್ಕಿದೇನು?.. ವಿಡಿಯೋ - ಬೃಹತ್ ಮರದ ಪೆಟ್ಟಿಗೆ
🎬 Watch Now: Feature Video
Published : Sep 30, 2023, 5:51 PM IST
|Updated : Sep 30, 2023, 6:04 PM IST
ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮುದ್ರ ತೀರಕ್ಕೆ ಬೃಹತ್ ಮರದ ಪೆಟ್ಟಿಗೆಯೊಂದು ಕೊಚ್ಚಿಕೊಂಡು ಬಂದ ಘಟನೆ ನಡೆದಿದೆ. ಇದು ಬ್ರಿಟಿಷರ ಕಾಲದ ಪೆಟ್ಟಿಗೆ ಹಾಗೂ ಸುಮಾರು 100 ಟನ್ ತೂಕ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳದ ಸಮ್ಮುಖದಲ್ಲಿ ಪೆಟ್ಟಿಗೆಯನ್ನು ಪೊಲೀಸರು ಒಡೆದಿದ್ದು, ಯಾವುದೇ ಹಾನಿಕಾರಕ ವಸ್ತುಗಳು ಪತ್ತೆಯಾಗಿಲ್ಲ.
ಇಲ್ಲಿನ ವೈಎಂಸಿಎ ಬೀಚ್‌ನಲ್ಲಿ ಶುಕ್ರವಾರ ಬೃಹತ್ ಮರದ ಪೆಟ್ಟಿಗೆಯು ಕೊಚ್ಚಿ ಬಂದ ವಿಷಯ ತಿಳಿದ ಜನರು ಇದನ್ನು ನೋಡಲು ಮುಗಿಬಿದ್ದಿದ್ದರು. ಈ ವಿಷಯ ತಿಳಿದ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಪುರಾತನ ಕಾಲದ ಮರದ ಪೆಟ್ಟಿಗೆಯಾಗಿದ್ದರಿಂದ ಪೊಲೀಸರು ಪುರಾತತ್ವ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಸಮುದ್ರ ದಡಕ್ಕೆ ಕೊಚ್ಚಿಕೊಂಡು ಬಂದ ಈ ಬೃಹತ್ ಪೆಟ್ಟಿಗೆ ಬಗ್ಗೆ ಜನರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಅಷ್ಟೇ ಅಲ್ಲ, ಮರದ ಪೆಟ್ಟಿಗೆ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಆದ್ದರಿಂದ ಬಹಳ ಎಚ್ಚರಿಕೆಯಿಂದ ಎರಡು ಹಿಟಾಚಿಗಳ ಸಹಾಯದಿಂದ ಪಟ್ಟಿಗೆಯನ್ನು ಒಡೆಯಲಾಯಿತು. ಬಾಂಬ್ ನಿಷ್ಕ್ರಿಯ ದಳದವರು ಕೂಡ ಈ ಸಮಯದಲ್ಲಿ ಹಾಜರಿದ್ದರು. ಪೆಟ್ಟಿಗೆಯಲ್ಲಿ ಯಾವುದೇ ಹಾನಿಕಾರಕ ವಸ್ತುಗಳು ಕಂಡುಬಂದಿಲ್ಲ. ಇದರಿಂದ ಜಿಲ್ಲಾಡಳಿತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಈ ಪಟ್ಟಿಗೆಯು ಸಮುದ್ರದಲ್ಲಿ ಹಡಗುಗಳನ್ನು ಲಂಗರು ಹಾಕಲು ಬಳಸುವ ಮರದ ಜೋಡಣೆ ಎಂದು ತಿಳಿದು ಬಂದಿದೆ.