ಬಿಸಿಲಿನ ಧಗೆ: ಸ್ಕೂಟರ್ ಓಡಿಸುತ್ತಲೇ ಸ್ನಾನ ಮಾಡಿದ ಯುವಕನಿಗೆ ಪೊಲೀಸರಿಂದ ಶಾಕ್ - ತಮಿಳುನಾಡಿನಲ್ಲಿ ಬಿಸಿಲಿನ ಧಗೆ
🎬 Watch Now: Feature Video

ತಂಜಾವೂರು (ತಮಿಳುನಾಡು): ದೇಶಾದ್ಯಂತ ಬಿಸಿಲಿನ ಧಗೆ ದಿನದಿಂದ ಹೆಚ್ಚುತ್ತಲೇ ಇದೆ. ಅದರಲ್ಲೂ, ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆಯ ತೀವ್ರ ತಾಪಕ್ಕೆ ಜನರು ಪರದಾಡುತ್ತಿದ್ದಾರೆ. ಇದರ ನಡುವೆ ಯುವಕನೊಬ್ಬ ತನ್ನ ಸ್ಕೂಟರ್ ಚಲಾಯಿಸುತ್ತಲೇ ಬಕೆಟ್‌ನಿಂದ ತಲೆ ಮೇಲೆ ನೀರು ಸುರಿದುಕೊಂಡು ಸ್ನಾನ ಮಾಡಿಕೊಂಡು ಹೋಗುತ್ತಿರುವ ಘಟನೆ ತಂಜಾವೂರಿನಲ್ಲಿ ನಡೆದಿದೆ. ಈ ದೃಶ್ಯವನ್ನು ಆತನ ಸ್ನೇಹಿತ ವಿಡಿಯೋ ಮಾಡಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳಲಾಗಿದ್ದು, ಸಾಕಷ್ಟು ವೈರಲ್ ಆಗಿದೆ.
ತಂಜಾವೂರಿನ ಕೀಳವಾಸಲ್ ಪ್ರದೇಶದಲ್ಲಿ ಮೇ 17ರಂದು ಈ ಘಟನೆ ನಡೆದಿದೆ. ಸ್ಕೂಟರ್ನಲ್ಲಿ ಯುವಕ ಮುಂದೆ ನೀರು ತುಂಬಿರುವ ಬಕೆಟ್ನಲ್ಲಿ ಇಟ್ಟುಕೊಂಡಿದ್ದು, ಸ್ಕೂಟರ್ ಓಡಿಸುತ್ತಲೇ ಟಬ್ನಿಂದ ತಲೆ ಮೇಲೆ ನೀರು ಸುರಿದುಕೊಂಡಿದ್ದಾನೆ. ಮತ್ತೊಂದೆಡೆ, ಆತನ ಸ್ನೇಹಿತ ಈ ದೃಶ್ಯವನ್ನು ತನ್ನ ಮೊಬೈಲ್ನಲ್ಲಿ ಸೆರೆಹಿಡಿದ್ದಾನೆ. ಅಲ್ಲದೇ, ವಿಡಿಯೋವನ್ನು ಈ ಯುವಕರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದು, ಸ್ಕೂಟರ್ ಸವಾರ ಮತ್ತು ವಿಡಿಯೋ ಮಾಡಿದ ಸ್ನೇಹಿತನನ್ನು ಪತ್ತೆ ಹಚ್ಚಿದ್ದಾರೆ. ಇವರನ್ನು 23 ವರ್ಷದ ಅರುಣಾಚಲಂ ಮತ್ತು 24 ವರ್ಷದ ಪ್ರಸನ್ನ ಎಂದು ಗುರುತಿಸಲಾಗಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸಿದ ಕಾರಣಕ್ಕೆ 2000 ದಂಡ ರೂಪಾಯಿ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಸಂಚಾರಿ ವಿಭಾಗದ ಇನ್ಸ್ಪೆಕ್ಟರ್ ರವಿಚಂದ್ರನ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ : ಕುರಿಮರಿ ನುಂಗಲು ಯತ್ನಿಸಿದ ಬೃಹತ್ ಗಾತ್ರದ ಹೆಬ್ಬಾವು ಸೆರೆ