ಬೆಂಗಳೂರು: ನಾಲ್ಕು ವರ್ಷದ ಮಗುವಿನ ಮೇಲೆರಗಿದ ಜರ್ಮನ್ ಶಫರ್ಡ್ ಶ್ವಾನ; Video - ಕೆಆರ್ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ
🎬 Watch Now: Feature Video
ಬೆಂಗಳೂರು : ನಾಲ್ಕು ವರ್ಷದ ಹೆಣ್ಣು ಮಗುವಿನ ಮೇಲೆ ಸಾಕು ನಾಯಿ ದಾಳಿ ನಡೆಸಿರುವ ಘಟನೆ ಕೆಆರ್ ಪುರದ ಬಸವನಪುರ ಮುಖ್ಯರಸ್ತೆಯ ಕೃಷ್ಣ ಚಿತ್ರಮಂದಿರ ಬಳಿ ಬುಧವಾರ ಬೆಳಗ್ಗೆ ನಡೆದಿದೆ. ತಾಯಿಯೊಂದಿಗೆ ಹೊರಟಿದ್ದ ಮಗು ವಿನೀಶಾ ಮೇಲೆ ಜರ್ಮನ್ ಶಫರ್ಡ್ ತಳಿಯ ಸಾಕು ಶ್ವಾನ ದಾಳಿ ಮಾಡಿದೆ.
ಚಂದ್ರಶೇಖರ್ ಮತ್ತು ಶೀಲಾ ದಂಪತಿಯ ನಾಲ್ಕು ವರ್ಷದ ಮಗಳು ವಿನೀಶಾ ಬೆಳಗ್ಗೆ 7.30ರ ಸಮಯದಲ್ಲಿ ಆಟವಾಡಲು ತನ್ನ ಸಹಪಾಠಿಯ ಮನೆಗೆ ಹೋಗುತ್ತಿದ್ದಳು. ಈ ವೇಳೆ ಆನಂದ್ ಎನ್ನುವವರ ಮನೆಯ ಸಾಕು ನಾಯಿ ಏಕಾಏಕಿ ಬಾಲಕಿಯ ಮೇಲೆ ಎರಗಿದೆ. ಕೈ ಮತ್ತು ಭುಜಕ್ಕೆ ಕಚ್ಚಿ ಗಾಯಗೊಳಿಸಿದೆ. ಬಾಲಕಿ ಕಿರುಚಿಕೊಂಡಾಗ ಸ್ಥಳೀಯರು ಒಟ್ಟಾಗಿ ಬಂದು ಮಗುವನ್ನು ರಕ್ಷಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮಗುವಿಗೆ ಕೆಆರ್ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಬಳಿಕ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಮೇಲೆ ನಾಯಿ ದಾಳಿ ಮಾಡಿ ಕಚ್ಚುತ್ತಿರುವ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಭಯಭೀತರಾಗಿದ್ದಾರೆ.
ಓದಿ: ಧಾರವಾಡದಲ್ಲಿ ಶಾಲಾ ಮಕ್ಕಳು ಸೇರಿ ಐವರಿಗೆ ಕಚ್ಚಿ ಗಾಯಗೊಳಿಸಿದ ನಾಯಿ