ರಸ್ತೆ ಪಕ್ಕದಲ್ಲಿ ನಿಂತಿದ್ದ ಬಾಲಕನ ಮೇಲೆ ದಾಳಿ ನಡೆಸಿದ ಗೂಳಿ.. ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video

ಶಿವಮೊಗ್ಗ: ಸಹೋದರರು ಸೈಕಲ್ನಲ್ಲಿ ಆಟವಾಡುತ್ತಿರುವುದನ್ನು ನೋಡುತ್ತ ನಿಂತಿದ್ದ ಬಾಲಕನಿಗೆ ಹಿಂಬದಿಯಿಂದ ಬಂದ ಗೂಳಿ ಏಕಾಏಕಿ ದಾಳಿ ನಡೆಸಿರುವ ಘಟನೆ ಸಾಗರ ಪಟ್ಟಣದಲ್ಲಿ ನಡೆದಿದೆ. ಇಲ್ಲಿಯ ನೆಹರು ಬಡಾವಣೆಯಲ್ಲಿ 6 ವರ್ಷದ ಬಾಲಕ ನವಾಜ್ ಅಲಿಖಾನ್ ಸಂಜೆ ವೇಳೆ ಮನೆ ಹತ್ತಿರದ ರಸ್ತೆ ಪಕ್ಕದಲ್ಲಿ ನಿಂತು ತನ್ನ ಸಹೋದರರು ಸೈಕಲ್ನಲ್ಲಿ ಆಟ ಆಡುವುದನ್ನು ನೋಡುತ್ತಿದ್ದ. ಈ ವೇಳೆ ಗೂಳಿ ಹಿಂಬದಿಯಿಂದ ಬಂದು ಗುದ್ದಿ ಎತ್ತಿ ಹಾಕಿದೆ.
ಇದನ್ನು ಕಂಡು ನವಾಜ್ ಪೋಷಕರು ಮನೆಯಿಂದ ಹೊರ ಓಡಿ ಬಂದು ಬಾಲಕನನ್ನು ರಕ್ಷಿಸಿದ್ದಾರೆ. ಅಲ್ಲದೇ ಗೂಳಿಯನ್ನು ಅಲ್ಲಿಂದ ಓಡಿಸಿದ್ದಾರೆ. ಗೂಳಿ ದಾಳಿಗೊಳಗಾದ ನವಾಜ್ ತಲೆ ಕೆಳಗಾಗಿ ಬಿದ್ದಿದ್ದಾನೆ. ಇದರಿಂದ ತಲೆ ಹಾಗೂ ಕಾಲಿಗೆ ಗಾಯಗಳಾಗಿವೆ. ಘಟನೆಯ ಎಲ್ಲ ದೃಶ್ಯಗಳು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕೂಡಲೇ ಗಾಯಾಳು ಬಾಲಕ ನವಾಜ್ನನ್ನು ಸಾಗರದ ಆಸ್ಪತ್ರೆಗೆ ಕರದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಬೀದಿ ನಾಯಿಗಳ ದಾಳಿ.. 20ಕ್ಕೂ ಅಧಿಕ ಕುರಿಗಳ ಸಾವು
ಇದನ್ನೂ ಓದಿ: ಕಸಾಯಿಖಾನೆಗೆ ತಂದಿಳಿಸಿದಾಗ ಹಗ್ಗ ಹರಿದು ಓಡಿದ ಎಮ್ಮೆ; ತಿವಿತಕ್ಕೆ ಚಿತ್ರದುರ್ಗದ ಯುವಕ ಸಾವು