ಬೃಹತ್ ಆಕಾರದ ಹೆಬ್ಬಾವು ಪ್ರತ್ಯಕ್ಷ - ವಿಡಿಯೋ
🎬 Watch Now: Feature Video
Published : Dec 17, 2023, 12:57 PM IST
ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರೂರ ಗ್ರಾಮದಲ್ಲಿ ಬೃಹತ್ ಆಕಾರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉರಗ ತಜ್ಞ ಅನಿಲ್ ಬಡಿಗೇರ ಹಾವನ್ನು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಹೆಬ್ಬಾವಿಗೆ ಒಡೆದ ಮದ್ಯದ ಬಾಟಲಿ ತಗುಲಿದ್ದರಿಂದ ಸಣ್ಣ ಪ್ರಮಾಣದ ಗಾಯವಾಗಿದ್ದು, ಅರಿಶಿನದ ಪುಡಿ ಹಚ್ಚಿ ಆರೈಕೆ ಮಾಡಿ ಬಳಿಕ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಇದನ್ನೂ ಓದಿ : Watch Video - ಮನೆಯ ಆವರಣದಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಹೆಬ್ಬಾವು.. ರಕ್ಷಿಸಿ ಕಾಡಿಗೆ ಬಿಟ್ಟ ಉರಗಪ್ರೇಮಿ
21 ವರ್ಷದ ಸುನೀಲ್ ಅವರು ಚಿಕ್ಕ ವಯಸ್ಸಿನಲ್ಲೇ ಹಾವುಗಳನ್ನು ಹಿಡಿಯುವ ಕಲೆ ಕರಗತ ಮಾಡಿಕೊಂಡು ಈವರೆಗೆ ನೂರಾರು ಉರಗಗಳನ್ನು ರಕ್ಷಣೆ ಮಾಡುವ ಮೂಲಕ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಬೃಹತ್ ಆಕಾರದ ಈ ಹಾವನ್ನು ನೋಡಿ ಶಿರೂರ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು. ಆದರೆ ಉರಗ ಪ್ರೇಮಿಯಿಂದ ಹಾವಿನ ಸ್ಥಳಾಂತರವಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : 9 ಅಡಿ ಉದ್ದದ ಅತಿ ದೊಡ್ಡ ಬಿಳಿ ಹೆಬ್ಬಾವು ಕುಮಟಾದಲ್ಲಿ ಪತ್ತೆ !- ವಿಡಿಯೋ ನೋಡಿ