ರೂಬಿಕ್ಸ್ ಕ್ಯೂಬ್ ಬಿಡಿಸುವಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿದ 6 ವರ್ಷದ ಬಾಲಕಿ - solving the Rubiks Cube

🎬 Watch Now: Feature Video

thumbnail

By

Published : Jul 4, 2023, 7:24 PM IST

ಗುಜರಾತ್‌: ಇಲ್ಲಿನ ಅಹಮದಾಬಾದ್‌ನ ಆರು ವರ್ಷದ ಕನಿಕಾ ಭಗತಿಯಾ ಅವರು 3×3 ಮಲ್ಟಿ ಕ್ಯೂಬ್ ಅನ್ನು ಪರಿಹರಿಸುವ ಅತ್ಯಂತ ಕಿರಿಯ ಭಾರತೀಯ ಕ್ಯೂಬರ್  ಆಗಿದ್ದು, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕೇವಲ 4 ವರ್ಷದವಳಿದ್ದಾಗ ಪ್ರಾರಂಭಿಸಿದ ಕನಿಕಾ ಕೇವಲ ಎರಡು ತಿಂಗಳೊಳಗೆ ರೂಬಿಕ್ಸ್ ಕ್ಯೂಬ್ ಅನ್ನು ಹೇಗೆ ಪರಿಹರಿಸಬೇಕೆಂದು ಕಲಿತ್ತಿದ್ದಾರೆ. ಪ್ರಸ್ತುತ, ಅವರು ರೂಬಿಕ್ಸ್ ಘನಗಳ ಎಂಟು ಅತ್ಯಂತ ಸವಾಲಿನ ವಿಧಗಳನ್ನು ಯಶಸ್ವಿಯಾಗಿ ಪರಿಹರಿಸಬಲ್ಲಳು.  

'ಕೋವಿಡ್ ಅಲೆ ಅಪ್ಪಳಿಸುವ ಸ್ವಲ್ಪ ಸಮಯದ ಮೊದಲು ನಾವು  ಒಂದು ಹುಟ್ಟುಹಬ್ಬದ ಪಾರ್ಟಿಗೆ ಭೇಟಿ ನೀಡಿದ್ದೆವು. ಕನಿಕಾಗೆ ರಿಟರ್ನ್ ಗಿಫ್ಟ್ ಆಗಿ (ರೂಬಿಕ್ಸ್) ಕ್ಯೂಬ್ ಸಿಕ್ಕಿತು. ಅವಳು ಕ್ಯೂಬ್ ತೆಗೆದುಕೊಂಡು  ಒಂದು ಬದಿಯಲ್ಲಿ ಎಲ್ಲಾ ಬಣ್ಣಗಳು ಒಂದೇ ಕಡೆ ಬರುವಂತೆ ಮಾಡಿದಳು. ನಂತರ ಅದನ್ನು ನನ್ನ ಬಳಿಗೆ ತಂದು, ಕ್ಯೂಬ್​ ಅನ್ನು ಸರಿಪಡಿಸುವುದಾಗಿ ತೋರಿಸಿದಳು. ತದನಂತರ ನಾವು ಕ್ಯೂಬ್​ ಪರಿಹರಿಸುವುದಕ್ಕಾಗಿ ಹತ್ತಿರದ ಅಕಾಡೆಮಿಯನ್ನು ಹುಡುಕಿದೆವು. ಅಲ್ಲಿ ಅವಳು ಬೇಸಿಕ್ ಕ್ಯೂಬ್​ಗಳನ್ನ ಹೇಗೆ ಪರಿಹರಿಸಬೇಕೆಂದು ಕಲಿತಳು. ಅಲ್ಲಿಂದ ಅವಳ ಸಂಪೂರ್ಣ ಪ್ರಯಾಣ ಪ್ರಾರಂಭವಾಯಿತು' ಎಂದು ಅವಳ ತಂದೆ ಕನಿಕಾ ತಂದೆ ಕೆಯೂರ್ ಭಗತಿಯಾ ಅವರು ತಿಳಿಸಿದ್ದಾರೆ.

ಯುವ ಕ್ಯೂಬ್-ಮಾಸ್ಟರ್‌ಗೆ ಪ್ರಮುಖ ಸ್ಫೂರ್ತಿ ಸೈನಾ ನೆಹ್ವಾಲ್:  'ಒಂದು ಬಾರಿ ತಂದೆ ಸೈನಾ ನೆಹ್ವಾಲ್ ಅವರ ಚಲನಚಿತ್ರವನ್ನು ನೋಡುತ್ತಿದ್ದರು. ಆಗ ನಾನು ತಂದೆಯವರನ್ನು ನೀವು ಏನು ನೋಡುತ್ತಿದ್ದೀರಿ ಎಂದು ಕೇಳಿದೆ. ಆಗ ಅವರು ಪ್ರತಿಕ್ರಿಯಿಸಿ, ಅವರು ಬ್ಯಾಡ್ಮಿಂಟನ್ ಆಡುತ್ತಾರೆ ಮತ್ತು ಅದಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ ಎಂದರು. ಅಲ್ಲದೇ, ಪದಕಗಳನ್ನು ಖರೀದಿಸುವುದರಿಂದ ಮಾತ್ರ ಪದಕಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ನನಗೆ ಹೇಳಿದರು. ನಾವು ಅಭ್ಯಾಸ ಮಾಡಬೇಕು ಮತ್ತು ಸೋಲನ್ನು ಎಂದಿಗೂ ಒಪ್ಪಿಕೊಳ್ಳಬಾರದು ಎಂದು ಅವರು ಹೇಳಿದರು' ಎಂದು ಕನಿಕಾ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ರೂಬಿಕ್ ಕ್ಯೂಬ್ ಗಿನ್ನಿಸ್ ದಾಖಲೆಯ ಪ್ರಯತ್ನ

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.