ಪಾದರಕ್ಷೆ, ಒಳಉಡುಪಿನಲ್ಲಿದ್ದ ₹1.40 ಕೋಟಿ ಮೌಲ್ಯದ 3 ಕೆಜಿ ಚಿನ್ನ ವಶಕ್ಕೆ!- ವಿಡಿಯೋ - ETV Bharat kannada News

🎬 Watch Now: Feature Video

thumbnail

By

Published : Mar 12, 2023, 10:42 AM IST

ಮಹಾರಾಷ್ಟ್ರ (ಮುಂಬೈ) : ಅಪಾರ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ಸಾಗಣಿಕೆ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮಾರ್ಚ್ 10ರಂದು ಅಡಿಸ್ ಅಬಾಬಾದಿಂದ ಮುಂಬೈಗೆ ಆಗಮಿಸಿದ್ದ ಆರೋಪಿಗಳು ತಮ್ಮ ಒಳಉಡುಪು ಮತ್ತು ಪಾದರಕ್ಷೆಗಳ ಒಳಭಾಗದಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದರು. ಸುಮಾರು 1.40 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ.    

ಈ ಹಿಂದಿನ ಪ್ರಕರಣಗಳು..: ಏರ್​ ಇಂಡಿಯಾ ಎಕ್ಸ್​ಪ್ರೆಸ್ ಉದ್ಯೋಗಿಯೊಬ್ಬರು ಅಕ್ರಮವಾಗಿ ಒಂದೂವರೆ ಕೆಜಿ ಚಿನ್ನ ಸಾಗಿಸುತ್ತಿದ್ದಾಗ ಕಸ್ಟಮ್​ ಇಲಾಖೆ ಅಧಿಕಾರಿಗಳ ಕೈಗೆ ಇತ್ತೀಚೆಗೆ ಸಿಕ್ಕಿಬಿದ್ದಿದ್ದರು. ಕೇರಳದ ಕೊಚ್ಚಿನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 8ರಂದು ಘಟನೆ ನಡೆದಿದೆ. ವಿಮಾನವು ಬಹ್ರೇನ್​ನಿಂದ ಕೊಚ್ಚಿನ್ ವಿಮಾಣ ನಿಲ್ದಾಣಕ್ಕೆ ಬಂದಿತ್ತು. ವಿಮಾನದ ಕ್ಯಾಬಿನ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶಫಿ ಎಂಬಾತ ಕಳ್ಳಸಾಗಣೆ ಮಾಡುತ್ತಿದ್ದ ಎಂಬ ರಹಸ್ಯ ಮಾಹಿತಿ ಕಸ್ಟಮ್ಸ್​​ ಅಧಿಕಾರಿಗಳಿಗೆ ಲಭಿಸಿತ್ತು. ನಂತರ ಅಧಿಕಾರಿಗಳು ಆತನ ಮೇಲೆ ವಿಶೇಷ ನಿಗಾ ಇಟ್ಟಿದ್ದರು. ವಿಮಾನವು ನಿಲ್ದಾಣದಲ್ಲಿ ಲ್ಯಾಂಡ್​ ಆದ ಬಳಿಕ ಗ್ರೀನ್​ ಚಾನೆಲ್​ನಿಂದ ಹೊರಬಂದ ಶಫಿ ಕಸ್ಟಮ್ಸ್‌ ಕೈಗೆ ಸಿಕ್ಕಿಬಿದ್ದಿದ್ದ.

ಇದನ್ನೂ ಓದಿ: ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ಎಚ್ಚರ: ಮನೆಗಳಿಗೆ ಕನ್ನ ಹಾಕಿದ್ದ ನೇಪಾಳಿ‌ ಕಳ್ಳರ ಬಂಧನ      

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.