ಕೇರಳ ಘಟನೆ ಬೆನ್ನಲ್ಲೇ ಮತ್ತೊಂದು ದುರಂತ.. ಸಟ್ಲೆಜ್ ನದಿಯಲ್ಲಿ ದೋಣಿ ಮಗುಚಿ ಇಬ್ಬರು ಸಾವು - punjab news
🎬 Watch Now: Feature Video
ರೂಪನಗರ (ಪಂಜಾಬ್): ಸಟ್ಲೆಜ್ ನದಿಯಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ 2 ಮಂದಿ ಸಾವನ್ನಪ್ಪಿರುವ ಘಟನೆ ಪಂಜಾಬ್ನ ರೂಪನಗರ ಜಿಲ್ಲೆಯ ಚೋಂಟಾ ಗ್ರಾಮದ ಬಳಿ ನಡೆದಿದೆ. ದೋಣಿ ಪ್ರಯಾಣಿಸುತ್ತಿದ್ದ ಆರು ಜನರ ಪೈಕಿ 2 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮೃತದೇಹಗಳ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.
ಭಾನುವಾರ ಸಂಜೆ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ದೋಣಿಯಲ್ಲಿ ನದಿ ದಾಟುತ್ತಿರುವಾಗ ವೇಳೆ ಅಸಮತೋಲನ ಉಂಟಾಗಿ ದೋಣಿಯಲ್ಲಿದ್ದ ಆರು ಜನರಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ. ರಾಮ್ ಲುಭಾಯಾ (32) ಮತ್ತು ಭಗತ್ರಂ (45) ಮೃತರು ಎಂದು ಗುರುತಿಸಲಾಗಿದೆ. ಈ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿ ಮೃತ ದೇಹಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಈಗಾಗಲೇ ರಾಮ್ ಲುಭಾಯಾ ಅವರ ಮೃತದೇಹ ಪತ್ತೆಯಾಗಿದ್ದು, ಭಗತ್ರಂ ಅವರ ಮೃತ ದೇಹಕ್ಕಾಗಿ ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ.
ಕೇರಳದ ಮಲಪ್ಪುರಂನಲ್ಲಿ ಭಾನುವಾರ ಹೌಸ್ಬೋಟ್ ಮುಳುಗಿದ ಪರಿಣಾಮ 22 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.
ಇದನ್ನೂ ಓದಿ : ಆಸ್ತಿ, ಹಣ ಹಂಚಲಿಲ್ಲವೆಂದು ತಾಯಿಯ ಅಂತ್ಯಕ್ರಿಯೆ ಮಾಡದ ಮಕ್ಕಳು: ಆಸ್ಪತ್ರೆಯಲ್ಲಿ ಶವ ಅನಾಥ