Video: ಶಾಸಕ ರುದ್ರಪ್ಪ ಲಮಾಣಿ ಪರ ದೀಡ್ ನಮಸ್ಕಾರ ಹಾಕಿದ ಬೆಂಬಲಿಗ - deed namaskar
🎬 Watch Now: Feature Video
ಹಾವೇರಿ : ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಬೆಂಬಲಿಗರಾದ ಹಳೇರಿತ್ತಿ ಗ್ರಾಮದ ಗುಡ್ಡಪ್ಪ ನಿಂಗಪ್ಪ ಬೆಳವಿಗಿ ಎಂಬುವರು ಮೈಲಾರಲಿಂಗೇಶ್ವರನಿಗೆ ದೀಡ್ ನಮಸ್ಕಾರ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು. ವಿಧಾನಸಭೆ ಚುನಾವಣೆಯಲ್ಲಿ ರುದ್ರಪ್ಪ ಲಮಾಣಿ ಜಯಶಾಲಿಯಾದರೆ ಮೈಲಾರಲಿಂಗೇಶ್ವರನಿಗೆ ದೀಡನಮಸ್ಕಾರ ಹಾಕುವುದಾಗಿ ಹರಕೆ ಕಟ್ಟಿದ್ದರಂತೆ. ಅದರಿಂದ, ಮಂಗಳವಾರ ಗುಡ್ಡಪ್ಪ ತಮ್ಮ ಬೆಂಬಲಿಗರ ಜೊತೆ ಮೈಲಾರದ ತುಂಗಭದ್ರಾ ನದಿಯಿಂದ ಮೈಲಾರಲಿಂಗೇಶ್ವರ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕಿದರು.
ಇದನ್ನೂ ಓದಿ : ನ್ಯಾಯ ಸಮ್ಮತ ಬೇಡಿಕೆ ಈಡೇರಿಸಲು ಪಕ್ಷಾತೀತವಾಗಿ ಕೆಲಸ ಮಾಡುವೆ : ರುದ್ರಪ್ಪ ಲಮಾಣಿ
ತುಂಗಭದ್ರಾ ನದಿಯಿಂದ ದೇವಸ್ಥಾನದವರೆಗೆ ಸುಮಾರು ಎರಡು ಕಿ.ಮೀ ದೀಡ್ ನಮಸ್ಕಾರ ಹಾಕಿದರು. ಗುಡ್ಡಪ್ಪನವರ ಈ ಕಾರ್ಯಕ್ಕೆ ಗ್ರಾಮದ ಹಲವರು ಸಾಥ್ ನೀಡಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಪರ ಜಯಘೋಷ ಕೂಗಲಾಯಿತು.
ಇದನ್ನೂ ಓದಿ : ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಪ್ರತಿಭಟನೆ : ಸಿದ್ದರಾಮಯ್ಯ ವಿರುದ್ಧ ಆಕ್ರೋಶ