ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಕಡಿತ: ಉತ್ತರಾಖಂಡದಲ್ಲಿ ಸಿಲುಕಿದ 15 ಮಂದಿ ಕನ್ನಡಿಗರು - ವಿಡಿಯೋ - etv bharat kannada
🎬 Watch Now: Feature Video
ಬೀದರ್: ಕೇದಾರನಾಥ ಹಾಗೂ ಭದ್ರಿನಾಥ್ ಯಾತ್ರಗೆ ತರಳಿದ್ದ ರಾಜ್ಯದ 15 ಜನ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಬೀದರ್ ಜಿಲ್ಲೆಯ ಐವರು ಮತ್ತು ಕಲಬುರಗಿ ಜಿಲ್ಲೆಯ 10 ಜನ ಯಾತ್ರಿಕರು, ಭದ್ರಿನಾಥ ದೇವಸ್ಥಾನಕ್ಕೆ ಹೋಗಿ ಹರಿದ್ವಾರಕ್ಕೆ ವಾಪಸ್ ಆಗುವ ವೇಳೆ ಮಾರ್ಗ ಮಧ್ಯದಲ್ಲಿ ಗುಡ್ಡ ಕುಸಿತ ಉಂಟಾದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡು ಮಾರ್ಗ ಮಧ್ಯೆಯೇ ಯಾತ್ರಿಕರು ಸಿಲುಕಿಕೊಂಡಿದ್ದಾರೆ.
ಈ ಬಗ್ಗೆ ಬೀದರ್ ಮೂಲದ ಯಾತ್ರಿಕ ಮಹೇಶ್ ಮಾತನಾಡಿ, ನಾವು ಬೀದರ್ನಿಂದ ಭದ್ರಿನಾಥ್ ದೇವಸ್ಥಾನಕ್ಕೆ ಬಂದಿದ್ದೆವು, ಆದರೆ ಇಲ್ಲಿ ಗುಡ್ಡ ಕುಸಿತ ಉಂಟಾಗಿ ಸುಮಾರು 7ಕಿಮೀ ನಷ್ಟು ರಸ್ತೆ ಸಂಚಾರ ಸ್ಥಗಿತವಾಗಿದೆ. ನಾವು ಹದಿನೈದು ಜನ ಬೀದರ್ ನಿಂದ ಬಂದಿದ್ದೆವು. ಈಗ ನಾವು ಇಲ್ಲೇ ಸಿಲುಕಿಕೊಂಡಿದ್ದೇವೆ. ಇಲ್ಲಿ ಧಾರಾಕಾರವಾಗಿ ಮಳೆ ಬರುತ್ತಿದೆ, ಹೀಗಾಗಿ ಕೇದಾರನಾಥ್ ಮತ್ತು ಭದ್ರಿನಾಥಕ್ಕೆ ಯಾರು ಈ ಸಮಯದಲ್ಲಿ ಬರಬೇಡಿ ಎಂದು ಮನವಿ ಮಾಡಿದ್ದಾರೆ.
ಮತ್ತೊಂದೆಡೆ, ಜುಲೈ.19ರಂದು ಗುಜರಾತಿನ ವೆರಾವಲ್ನಲ್ಲಿರುವ ಶ್ರೀ ಸೋಮನಾಥ ದೇವಾಲಯದ ದರ್ಶನಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯ ಜಿಲ್ಲಾಡಳಿತದ ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದೆ. ನಾವು ಸುರಕ್ಷಿತವಾಗಿರುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: Cloud burst: ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ.. ಚರಂಡಿಯಲ್ಲಿ ಸಿಲುಕಿದ ವಾಹನಗಳು