ಚಿಕ್ಕಮಗಳೂರು: ಸರ್ಪದ ಆರ್ಭಟಕ್ಕೆ ಬೆಚ್ಚಿದ ಜನ, 13 ಅಡಿ ಉದ್ದದ ಕಾಳಿಂಗ ಕೊನೆಗೂ ಸೆರೆ - ವಿಡಿಯೋ

By ETV Bharat Karnataka Team

Published : Nov 26, 2023, 4:31 PM IST

thumbnail

ಚಿಕ್ಕಮಗಳೂರು: ಜಿಲ್ಲೆಯಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸರೆ ಹಿಡಿಯಲಾಗಿದೆ. ಆದರೆ ಈ ಕಾಳಿಂಗ ಸರ್ಪದ ರೋಷಾವೇಶವನ್ನು ಯಾರೂ ನೋಡಿರಲಕ್ಕಿಲ್ಲ. ಈ ಸರ್ಪದ ಕೋಪ ನೋಡಿದ್ರೆ ಮೈ ಜುಮ್ ಅನ್ನುವಂತಿದೆ. ಇದರ ಕೋಪವನ್ನು ಕಣ್ಣಾರೆ ನೋಡಿದ ಸ್ಥಳೀಯರು, ಉರುಗ ತಜ್ಞ ಸಹ ಬೆಚ್ಚಿಬಿದ್ದಿದ್ದಾರೆ.

ಕಳಸ ತಾಲೂಕಿನ ಕಾರ್ಗದ್ದೆ ಗ್ರಾಮದ ವೀರಪ್ಪಗೌಡ ಎಂಬುವರ ಅಡಕೆ ತೋಟದಲ್ಲಿ ಬರೋಬ್ಬರಿ 13 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಇದನ್ನು ಸೆರೆ ಹಿಡಿಯಲು ಪ್ರಯತ್ನಿಸಿದಾಗ ಆ ಸರ್ಪದ ಆರ್ಭಟ ನೋಡಿ ಸ್ಥಳೀಯರೇ ದಿಗ್ಭ್ರಮೆಗೊಂಡಿದ್ದಾರೆ. 

ಮರದಲ್ಲಿ ಅವಿತು, ಮಲಗಿ ಈ ಕಾಳಿಂಗ ಸರ್ಪವೂ ಜನರನ್ನು ಆಟವಾಡಿಸಿತ್ತು. ಈ ಸರ್ಪದ ಆಟ ನೋಡಿ ಒಂದು ಕ್ಷಣ ಉರಗ ತಜ್ಞ ರಿಜ್ವಾನ್ ಸಹ ನಿಬ್ಬೆರಗಾಗಿ ನಿಂತಿದ್ದರು. ಕೋಪಿಷ್ಟ ಕಾಳಿಂಗನನ್ನು ಸೆರೆ ಹಿಡಿಯಲು ಹೋಗಿ ರಿಜ್ವಾನ್ ಸುಸ್ತಾಗಿದ್ದರು. ಸೆರೆ ಹಿಡಿಯುತ್ತಿದ್ದ ವೇಳೆ ಎರಡು ಮೂರು ಬಾರಿ ಮರದ ಕೊಂಬೆಯನ್ನು ಕಚ್ಚಿ ಕಾಳಿಂಗ ಸರ್ಪ ಆಕ್ರೋಶ ವ್ಯಕ್ತಪಡಿಸಿದೆ.

ಬಟ್ಟೆಯ ಗೋಣಿ ಚೀಲವನ್ನೇ ಕಚ್ಚಿ ಕಾಳಿಂಗ ಸರ್ಪ ಎಳೆದಾಡಿದೆ. ಎರಡು ಮೂರು ಬಾರಿ ಕಚ್ಚಿ, ವಿಷವನ್ನು ಹೊರ ಹಾಕಿ ಉರಗ ತಜ್ಞನಿಗೆ ರೌದ್ರಾವತಾರ ತೋರಿಸಿದೆ. ತನ್ನ ಹಠ ಬಿಡದೆ ಕೊನೆಗೂ ಕಾಳಿಂಗ ಸರ್ಪವನ್ನು ರಿಜ್ವಾನ್ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಸ್ಥಳೀಯ ಅರಣ್ಯಕ್ಕೆ ಸುರಕ್ಷಿತವಾಗಿ ರಿಜ್ವಾನ್ ಬಿಟ್ಟು ಬಂದಿದ್ದಾರೆ.

ಇದನ್ನೂಓದಿ:ಹಾವೇರಿ: ಮುಂದುವರಿದ ಕಾಡಾನೆ ಹಾವಳಿ, ಕಟಾವಿಗೆ ಬಂದ ಬೆಳೆ ನಾಶ VIDEO

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.