ಅಬ್ಬಬ್ಬಾ! ಬಂಡೂರು ತಳಿಯ ಟಗರಿಗೆ ₹ 1.10 ಲಕ್ಷ .. ಖರೀದಿಸಿದ ಖುಷಿಯಲ್ಲಿ ಊರ ತುಂಬಾ ಮೆರವಣಿಗೆ ಮಾಡಿದ ರೈತ - ಬಂಡೂರು ತಳಿ
🎬 Watch Now: Feature Video
ಮಂಡ್ಯ: ಬಂಡೂರು ತಳಿಯ ಟಗರನ್ನು ರೈತರೊಬ್ಬರು 1.10 ಲಕ್ಷ ರೂ. ನೀಡಿ ಖರೀದಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಹುಚ್ಚೇಗೌಡನದೊಡ್ಡಿ ಗ್ರಾಮದ ಮರಿಗೌಡ ಎಂಬುವರು ದುಬಾರಿ ಮೌಲ್ಯದ ಬಂಡೂರು ತಳಿಯ ಟಗರು ಖರೀದಿಸಿದ್ದಾರೆ.
ದೇವಿಪುರ ಗ್ರಾಮದಲ್ಲಿ ಖರೀದಿ ಮಾಡಿ ತಂದ ಟಗರನ್ನು ಹುಸ್ಕೂರು ಗ್ರಾಮಸ್ಥರು ಮೆರವಣಿಗೆ ಮಾಡಿದ್ದಾರೆ. ತಮಟೆ ಸದ್ದಿನ ಮೂಲಕ ಹುಸ್ಕೂರು ಗ್ರಾಮದಿಂದ ಹುಚ್ಚೇಗೌಡನ ದೊಡ್ಡಿವರೆಗೂ ಮೆರವಣಿಗೆ ಮಾಡಿದ್ದಾರೆ. ಹುಸ್ಕೂರು, ಅಪ್ಪಾಜಯ್ಯನದೊಡ್ಡಿ, ಬಾಣಗಹಳ್ಳಿ, ಅಂತರವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನೂರಾರು ಜನರು ಟಗರನ್ನು ನೋಡಲು ಜಮಾಯಿಸಿದ್ದರು.
10 ಲಕ್ಷ ರೂಪಾಯಿಗೆ ಮಾರಾಟವಾದ ಎತ್ತು: ಇತ್ತೀಚೆಗೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ರೈತರೊಬ್ಬರು ಸಾಕಿದ್ದ ಎತ್ತು 10 ಲಕ್ಷದ 25 ಸಾವಿರ ರೂಪಾಯಿಗೆ ಮಾರಾಟವಾಗಿತ್ತು. ವಿನು ಎಂಬುವರಿಂದ ಚಿಕ್ಕಮಗಳೂರಿನ ತೇಗೂರು ಮಂಜಣ್ಣ ದುಬಾರಿ ಬೆಲೆ ಕೊಟ್ಟು ಎತ್ತು ಖರೀದಿ ಮಾಡಿದ್ದರು. ರಾಜ್ಯದ ವಿವಿಧೆಡೆ ನಡೆದ ಎತ್ತಿನ ಗಾಡಿ ರೇಸ್‌ನಲ್ಲಿ ಭಾಗವಹಿಸಿದ್ದ ಈ 'ಬ್ರಾಂಡ್ ಅಪ್ಪಣ್ಣ' ಎಂಬ ಹೆಸರಿನ ಎತ್ತು ಸಾಕಷ್ಟು ಪ್ರಸಿದ್ಧಿ ಪಡೆದಿದೆ.
ಇದನ್ನೂ ಓದಿ: 10 ಲಕ್ಷ ರೂಪಾಯಿಗೆ ಮಾರಾಟವಾದ ಹಳ್ಳಿಕಾರ್ ಎತ್ತು 'ಬ್ರಾಂಡ್ ಅಪ್ಪಣ್ಣ'!- ವಿಡಿಯೋ