ಟಿಪ್ಪರ್ ಟೈರ್ ಬ್ಲಾಸ್ಟ್.. ಹೊತ್ತಿ ಉರಿದ ವಾಹನ, ಲಕ್ಷಾಂತರ ರೂ. ನಷ್ಟ - Fire at lorry in Chikkaballapur
🎬 Watch Now: Feature Video
ಚಿಕ್ಕಬಳ್ಳಾಪುರ: ಎಂ ಸ್ಯಾಂಡ್ ಸಾಗಿಸುತ್ತಿದ್ದ ಟಿಪ್ಪರ್ ಟೈರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಸುಮಾರು 2.50 ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ. ಪರೆಸಂದ್ರದಿಂದ ನಗರದ ಬೈಪಾಸ್ ರಸ್ತೆ ಕಾಮಗಾರಿಗೆ ಎಂ ಸ್ಯಾಂಡ್ ಸಾಗಿಸುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಟಿಪ್ಪರ್ ವಾಹನದ ಟೈರ್ ಬಿಸಿಲಿನ ತಾಪಕ್ಕೆ ಹೊತ್ತಿ ಉರಿದಿದೆ. ಘಟನೆಯಿಂದ ಎಚ್ಚೆತ್ತ ಚಾಲಕ ವಾಹನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೊತ್ತಿ ಉರಿಯುತ್ತಿದ್ದ ಟಿಪ್ಪರ್ ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿ ಶಾಮಕದಳದ ಸಿಬ್ಬಂದಿ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.
Last Updated : Feb 3, 2023, 8:21 PM IST