'ಕೆಜಿಎಫ್: ಚಾಪ್ಟರ್ 2' ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮ.. ಅಂಬರೀಶ್ ಸ್ಮರಿಸಿದ ಯಶ್ - 'KGF Chapter 2' Movie Trailer Release Program
🎬 Watch Now: Feature Video
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ರಾಕಿಂಗ್ ಸ್ಟಾರ್' ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ನಟ ಶಿವರಾಜ್ ಕುಮಾರ್ 'ಕೆಜಿಎಫ್ ಚಾಪ್ಟರ್ 2' ಟ್ರೈಲರ್ ಬಿಡುಗಡೆ ಮಾಡಿದರು. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ಹೀರೋ ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ನಾಗಭರಣ ಸರ್ ನಮ್ಮ ಗುರುಗಳು, ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಮಾಳವಿಕ ಮೇಡಂ ನನಗೆ ದೊಡ್ಡ ಸಿಸ್ಟರ್. ಇದೇ ವೇಳೆ ಅವರು ಡಿಜೈನರ್ ಸಾನಿಯಾ, ಕಿಟ್ಟಿ, ಸಚಿವ ಅಶ್ವತ್ಥನಾರಾಯಣ ಸೇರಿ ಇತರರನ್ನು ನೆನಪಿಸಿಕೊಂಡು, ಅವರಿಗೆ ಧನ್ಯವಾದ ಹೇಳಿದರು. ಬಳಿಕ ದಿ. ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ನೆನಪಿಸಿಕೊಂಡ ಯಶ್, ಕಳೆದ ಬಾರಿ ಅಂಬರೀಶ್ ಅಣ್ಣ ಟ್ರೇಲರ್ ಲಾಂಚ್ ಮಾಡಿದ್ರು, ಆದ್ರೆ ಈಗ ಅವರು ಇಲ್ಲ ಎಂದು ಭಾವುಕರಾಗಿ ಹೇಳಿದ್ರು.
Last Updated : Feb 3, 2023, 8:21 PM IST