ಪ್ರೊ ಕಬಡ್ಡಿ ಪಂದ್ಯಕ್ಕೆ ತುಳುವಿನಲ್ಲಿ ಆಹ್ವಾನಿಸಿದ ಹಾಸ್ಯ ನಟ ಜಾನಿ ಲಿವರ್ - ವಿಡಿಯೋ ವೈರಲ್ - Johnny Lever tulu language video
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14573378-thumbnail-3x2-sbvfhwr.jpg)
ಮಂಗಳೂರು(ದಕ್ಷಿಣ ಕನ್ನಡ): ನಗರದ ಬೋಳೂರಿನ ಬತ್ತೇರಿ ಫ್ರೆಂಡ್ಸ್ ಆಯೋಜಿಸಿರುವ ಪ್ರೊ ಕಬ್ಬಡ್ಡಿ ಪಂದ್ಯಕ್ಕೆ ಬಾಲಿವುಡ್‌ನ ಖ್ಯಾತ ಕಾಮಿಡಿ ನಟ ಜಾನಿ ಲಿವರ್ ತುಳುವಿನಲ್ಲಿ ಆಹ್ವಾನ ನೀಡಿರುವ ವಿಡಿಯೋ ವೈರಲ್ ಆಗಿದೆ. ಜಾನಿ ಲಿವರ್ ತುಳುವಿನಲ್ಲಿ ತಮ್ಮ ಹಾಸ್ಯದ ಮಾತುಗಳ ಮೂಲಕ ಕಬಡ್ಡಿ ಕ್ರೀಡೆಗೆ ಆಹ್ವಾನಿಸಿ, ಕಬಡ್ಡಿಯನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ. ಕಬಡ್ಡಿ ಆಟದಲ್ಲಿನ ಸನ್ನಿವೇಶವನ್ನು ತಮ್ಮ ಹಾಸ್ಯದ ಮೂಲಕ ಬಣ್ಣಿಸಿರುವ ಅವರು 3 ಆಟಗಳ ಖುಷಿಯನ್ನು ಕಬಡ್ಡಿ ಕ್ರೀಡೆಯಲ್ಲಿ ಕಾಣಬಹುದು ಎಂದು ಹೇಳಿದ್ದಾರೆ. ತುಳುವಿನಲ್ಲಿ ಅವರು ನೀಡಿರುವ ಆಹ್ವಾನ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:17 PM IST