ಒಂದಲ್ಲ ಎರಡಲ್ಲ... 146 ಕೆಜಿ ಚಿನ್ನದ ಬಿಸ್ಕತ್ ವಶಕ್ಕೆ ಪಡೆದ ಆಯೋಗ - ಈಟಿವಿ ಭಾರತ
🎬 Watch Now: Feature Video
ಲೋಕಸಭಾ ಚುನಾವಣೆ ಹಿನ್ನೆಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗದ ಕಣ್ಗಾವಲು ಪಡೆ, ದಿನದಿಂದ ದಿನಕ್ಕೆ ದಾಖಲೆ ರಹಿತ ನಗ-ನಾಣ್ಯ ವಶಪಡಿಸಿಕೊಳ್ಳುತ್ತಲಿದೆ. ತಮಿಳುನಾಡಿನ ಕೊಯಿಮತ್ತೂರು ಬಳಿಯ ಪುಲಿಕುಲಂನಲ್ಲಿ ಶುಕ್ರವಾರ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 146 ಕೆಜಿ ಬಂಗಾರವನ್ನು ಕಣ್ಗಾವಲು ಪಡೆ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ. ಚಿನ್ನಾಭರಣ ಅಂಗಡಿಗಳಿಗೆ ಚಿನ್ನವನ್ನು ಸಾಗಿಸುತ್ತಿದ್ದಾಗ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚಿನ್ನಾಭರಣ ವ್ಯಾಪಾರಸ್ಥರು ಸ್ಥಳಕ್ಕೆ ಬಂದು ಇದು ತಮ್ಮದೆಂದು ಹೇಳಿಕೊಂಡಿದ್ದಾರೆ. ಆದ್ರೆ ದಾಖಲೆ ಕೊಟ್ರೆ ಮರಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated : Apr 6, 2019, 10:52 AM IST