ಸುಬ್ರಹ್ಮಣ್ಯ ಸಮೀಪ ಮುಂದೆ ಹೋಗ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದ ಸವಾರ: ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ - ಕಡಬದ ಕೆಂಚೊಭಟ್ರೆ ನಿವಾಸಿ ಸುದರ್ಶನ್ ಬೈಪಡಿತ್ತಾಯ
🎬 Watch Now: Feature Video
ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ 113ರ ನೆಟ್ಟಣ ಸಮೀಪ ಮಸೀದಿಯ ಬಳಿ ಬೆಳಗ್ಗೆ ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಬರುತ್ತಿದ್ದ ಕಡಬದ ಕೆಂಚೊಭಟ್ರೆ ನಿವಾಸಿ ಸುದರ್ಶನ್ ಬೈಪಡಿತ್ತಾಯ ಎಂಬುವರ ಬೈಕಿಗೆ ಹಿಂದಿನಿಂದ ವೇಗದಲ್ಲಿ ಬೈಕ್ ಸವಾರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ಸುದರ್ಶನ್ ಬೈಪಡಿತ್ತಾಯ ಕೈಗೆ ತೀವ್ರ ಸ್ವರೂಪದ ಗಾಯವಾಗಿದೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.