ತರಕಾರಿ, ಮಟನ್ ಸಾರಿನ ಕೊಳದಲ್ಲಿ ರೆಸ್ಲಿಂಗ್... ಗ್ರೇವಿ ಕುಸ್ತಿಯಲ್ಲಿ ಪೈಲ್ವಾನರ ಜಿದ್ದಾ-ಜಿದ್ದಿ! - ಲಂಕಾಷೈರ್ ಗ್ರೇವಿ ರೆಜ್ಲಿಂಗ್ ಚಾಂಪಿಯನ್ಶಿಪ್
🎬 Watch Now: Feature Video
ಇಂಗ್ಲೆಂಡ್ನಲ್ಲಿ 2007 ರಿಂದಲೇ ಗ್ರೇವಿ ರೆಜ್ಲಿಂಗ್ ಚಾಂಪಿಯನ್ಶಿಪ್ ನಡೆಯುತ್ತಿದೆ. ಇದು ಮಣ್ಣಿನ ಮೈದಾನದಲ್ಲಿ ನಡೆಯುವ ಕುಸ್ತಿಯಲ್ಲ. ವೆಜ್ ಅಂಡ್ ನಾನ್ವೆಜ್ ಗ್ರೇವಿಯಿಂದ ತುಂಬಿರುವ ಕೊಳದಲ್ಲಿ ನಡೆಯುವ ಕಾಳಗ.. ಇದಕ್ಕಾಗೇ ವಿಶೇಷ ಕೊಳ ನಿರ್ಮಾಣ ಮಾಡಿ ಅದರಲ್ಲಿ ಮಾಂಸ ಹಾಗೂ ತರಕಾರಿಗಳ ಗ್ರೇವಿಯನ್ನು ತುಂಬಿ ಕಾಳಗಕ್ಕೆ ಬಿಡಲಾಗುತ್ತದೆ. ಈ ವೆಜ್ ಮತ್ತು ನಾನ್ ವೆಜ್ ಗ್ರೇವಿ ಕೊಳದಲ್ಲಿ ಕಾಳಗ ನಡೆಸಿ ಗೆದ್ದವರಿಗೆ ಸೂಕ್ತ ಬಹುಮಾನ ನೀಡಿ ಸನ್ಮಾನಿಸಲಾಗುತ್ತದೆ. ಅಂದ ಹಾಗೆ ಈ ಆಟ ಇಂಗ್ಲೆಂಡ್ನ ಲಂಕಾಷೈರ್ನ ರೋಜ್ ಬೌಲ್ ಪಬ್ಲಿಕ್ ಹೈಸ್ಕೂಲ್ನಲ್ಲಿ ನಡೆಯುತ್ತೆ. 2 ನಿಮಿಷದ ಜಿದ್ದಾ-ಜಿದ್ದಿ ಆಟವನ್ನು ವೀಕ್ಷಿಸಲು ಸುಮಾರು 1500ಕ್ಕೂ ಹೆಚ್ಚು ಜನ ಸೇರಿ ಸಖತ್ ಎಂಜಾಯ್ ಮಾಡುತ್ತಾರೆ.
Last Updated : Aug 28, 2019, 6:19 PM IST