ನಿಂಬೆ ಪಾನಕ ಅಂಗಡಿ ನಡೆಸಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಹಣ ಸಂಗ್ರಹಿಸುತ್ತಿರುವ ಬಾಲಕಿ! - ನಿಂಬೆ ಪಾನಕ ಅಂಗಡಿ
🎬 Watch Now: Feature Video
ಅಲಬಾಮಾ(ಯುಎಸ್): ನಿಂಬೆ ಪಾನಕ ಅಂಗಡಿ ನಡೆಸುವ ಮೂಲಕ 7 ವರ್ಷದ ಬಾಲಕಿಯೊಬ್ಬಳು ಸ್ವತಃ ತನ್ನ ಮೆದುಳಿನ ಶಸ್ತ್ರಚಿಕಿತ್ಸೆಗೋಸ್ಕರ ಹಣ ಸಂಗ್ರಹಿಸುತ್ತಿದ್ದಾಳೆ. ಮೆದುಳಿನ ಸ್ಕ್ಯಾನ್ಗೊಳಗಾದ ಬಳಿಕ ಆಕೆಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದೆ ಎಂಬ ವಿಚಾರ ಗೊತ್ತಾಗಿತ್ತು. ಇದೀಗ ಆಕೆ ಸ್ವತ: ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹಣ ಸಂಗ್ರಹ ಮಾಡುತ್ತಿದ್ದಾಳೆ. ಅದಕ್ಕೋಸ್ಕರ ನಿಂಬೆ ಪಾನಕ ಅಂಗಡಿಯನ್ನು ತೆರೆದಿದ್ದು, ಇಲ್ಲಿಯವರೆಗೆ ಪಾನಕ ಮಾರಾಟ ಮಾಡಿ 12,000 ಡಾಲರ್ ಹಣ ಸಂಗ್ರಹಿಸಿದ್ದಾಳೆ. ಆನ್ಲೈನ್ ನಿಧಿ ಸಂಗ್ರಹದ ಮೂಲಕ ಸಹ 290,000 ಡಾಲರ್ ಜಮಾವಣೆಗೊಂಡಿದೆ ಎಂದು ಬಾಲಕಿಯ ತಾಯಿ ಎಲಿಜಬೆತ್ ಹೇಳುತ್ತಾರೆ.
Last Updated : Mar 4, 2021, 3:45 PM IST