ಶಾಪಿಂಗ್ ಮಾಡಲು ಸೂಪರ್ ಮಾರ್ಕೆಟ್ಗೆ ಲಗ್ಗೆ ಹಾಕಿದ ಉಡ.. ದೈತ್ಯ ಪ್ರಾಣಿ ನೋಡಿ ಬೆಚ್ಚಿಬಿದ್ದ ಗ್ರಾಹಕರು! - ಶಾಪಿಂಗ್ ಮಾಲ್ಗೆ ಉಡ
🎬 Watch Now: Feature Video
ಬ್ಯಾಂಕಾಕ್: ಶಾಪಿಂಗ್ ಮಾಲ್ಗೆ ದಿಢೀರ್ ಆಗಿ ಲಗ್ಗೆ ಹಾಕಿರುವ ಬೃಹತ್ ಗಾತ್ರದ ಉಡವೊಂದು ಕೆಲಹೊತ್ತು ಅಲ್ಲಿನ ಜನರಲ್ಲಿ ಆತಂಕ ಸೃಷ್ಟಿ ಮಾಡಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗಿದೆ. ಥಾಯ್ಲೆಂಡ್ನಲ್ಲಿ ಈ ಘಟನೆ ನಡೆದಿದ್ದ ಸೂಪರ್ ಮಾರ್ಕೆಟ್ಗೆ ಲಗ್ಗೆ ಹಾಕಿರುವ ದೈತ್ಯ ಗಾತ್ರದ ಉಡವೊಂದು ಸರಸರನೇ ರಾಕ್ಗಳ ಮೇಲೆ ಓಡಾಡಿರುವ ಕಾರಣ ಕೆಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಈ ಘಟನೆ ಯಾವಾಗ ನಡೆದಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ, ವಿಡಿಯೋ ಮಾತ್ರ ಇದೀಗ ಸಖತ್ ಆಗಿ ಹರಿದಾಡ್ತಿದೆ. ಸ್ಥಳಕ್ಕಾಗಮಿಸಿದ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಅದನ್ನ ಸೆರೆ ಹಿಡಿದು ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ.