ಮೆಟ್ಗಾಲಾ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದ ಇಮಾನ್ - ಅಮೆರಿಕನ್ ಇಂಡಿಪೆಂಡೆನ್ಸ್
🎬 Watch Now: Feature Video
ನ್ಯೂಯಾರ್ಕ್‌ನಲ್ಲಿ ನಡೆದ ಪ್ರತಿಷ್ಠಿತ ಫ್ಯಾಶನ್ ಶೋ ಮೆಟ್ಗಾಲಾದಲ್ಲಿ ವಿಭಿನ್ನ ಉಡುಗೆಯಲ್ಲಿ ರೂಪದರ್ಶಿಯರು ಕಾಣಿಸಿಕೊಂಡು ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಮೆಟ್ಗಾಲಾ ಎನ್ನುವುದು ಪ್ರತಿವರ್ಷ ನಡೆಯುವ ಫ್ಯಾಷನ್ ಇವೆಂಟ್. ಸಂಗೀತ, ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳ ಖ್ಯಾತನಾಮರು ಮೆಟ್ಗಾಲಾ ಇವೆಂಟ್ನಲ್ಲಿ ಪಾಲ್ಗೊಳ್ಳುತ್ತಾರೆ. ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ಪ್ರತಿವರ್ಷ ಆಯೋಜನೆ ಮಾಡಲಾಗುತ್ತದೆ. ಮೆಟ್ನಲ್ಲಿ ಫ್ಯಾಷನ್ ಕಲೆಕ್ಷನ್ಗಾಗಿ ನಿಧಿ ಸಂಗ್ರಹಣೆಗಾಗಿ ಇವೆಂಟ್ ಆಯೋಜಿಸಲಾಗುತ್ತಿದ್ದು, ಪ್ರತಿವರ್ಷವೂ ವಿಭಿನ್ನ ಥೀಮ್ ನೀಡಲಾಗುತ್ತದೆ. 'ಅಮೆರಿಕನ್ ಇಂಡಿಪೆಂಡೆನ್ಸ್' ಈ ಬಾರಿಯ ಡ್ರೆಸ್ ಕೊಡ್. ಇಮಾನ್ ( ನಟಿ ) ಎನ್ನುವಾಕೆ ತನ್ನ ವಿಭಿನ್ನ ಮಾದರಿಯ ಉಡುಗೆಯ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ. ಅಗಾಧವಾದ ಚಿನ್ನದ ಶಿರಸ್ತ್ರಾಣದೊಂದಿಗೆ ಕಂಗೊಳಿಸುವ ಉಡುಪು ಧರಿಸಿ ಬೆರಗುಗೊಳಿಸಿದ್ದಾರೆ.