13.1ಟನ್ ಪ್ಯಾಂಗೋಲಿನ್ ಪ್ರಾಣಿಯ ಚಿಪ್ಪು, 9.7 ಟನ್ ಆನೆ ದಂತ ವಶಕ್ಕೆ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3927436-thumbnail-3x2-animal.jpg)
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಿಂದ ವಿಯೆಟ್ನಾಂಗೆ ಸಾಗಿಸುತ್ತಿದ್ದ 13.1 ಟನ್ ಪ್ಯಾಂಗೊಲಿನ್ ಪ್ರಾಣಿಯ ಚಿಪ್ಪು ಮತ್ತು 9.7 ಟನ್ ಆನೆ ದಂತಗಳನ್ನು ಸಿಂಗಾಪುರದ ರಾಷ್ಟ್ರೀಯ ಉದ್ಯಾನಗಳ ಮಂಡಳಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸುಮಾರು 300 ಆಫ್ರಿಕನ್ ಆನೆಗಳ ದಂತಗಳನ್ನು ಒಳಗೊಂಡಿದ್ದು, ಈ ದಂತಗಳು 12.9 ಮಿಲಿಯನ್ (ಯುಎಸ್ ಡಾಲರ್) ಬೆಲೆ ಬಾಳುತ್ತವೆ. 35.7 ಮಿಲಿಯನ್ (ಯುಎಸ್ ಡಾಲರ್) ಪ್ಯಾಂಗೋಲಿನ್ ಚಿಪ್ಪು ಮೌಲ್ಯವಾಗಿತ್ತು. ವಿಶ್ವದಲ್ಲೇ ಪ್ಯಾಂಗೊಲಿನ್ ಅನ್ನು ವ್ಯಾಪಕವಾಗಿ ಸಾಗಿಸುತ್ತಿರುವ ಸಸ್ತನಿ ಎನ್ನಲಾಗುತ್ತಿದೆ. ಈ ಪ್ರಾಣಿಯ ಚಿಪ್ಪಿನ ಕೆರಾಟಿನ್ನಿಂದ ಮಾಡಲ್ಪಟ್ಟಿದೆ ಮತ್ತು ಔಷಧಿಗಳಿಗೂ ಬಳಸುತ್ತಾರೆ.