ಸಂಭ್ರಮದಿಂದ ಜರುಗಿದ ಗುರುಗುಂಟಾ ಅಮರೇಶ್ವರ ಜಾತ್ರಾಮಹೋತ್ಸವ - ಗುರುಗುಂಟಾ ಅಮರೇಶ್ವರ ರಥೋತ್ಸವ
🎬 Watch Now: Feature Video
ಲಿಂಗಸುಗೂರು: ಉತ್ತರ ಕರ್ನಾಟಕ ಭಾಗದ ಐತಿಹಾಸಿಕ ಹಿನ್ನೆಲೆಯುಳ್ಳ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಅಮರೇಶ್ವರ ಜಾತ್ರಾಮಹೋತ್ಸವ ಪ್ರತಿ ವರ್ಷದಂತೆ ನಿನ್ನೆ ಸಹ ಸಾಂಪ್ರದಾಯಿಕವಾಗಿ ಜರುಗಿತು. ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ. ಈ ವರ್ಷ ಒಂದು ದಿನ ಮುಂಚಿತವಾಗಿ ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಜಾತ್ರೆಗೆ ಭಕ್ತರು ಆಗಮಿಸಿ, ದೇವಾಲಯದ ಬಳಿ ಬೀಡು ಬಿಟ್ಟಿದ್ದರು. ಶುಕ್ರವಾರ ಅಭಿನವ ಗಜದಂಡ ಶಿವಾಚಾರ್ಯರು ಕಳಸ ಮತ್ತು ಉತ್ಸವ ಮೂರ್ತಿ ಸಮೇತ ಅಮರೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ರಥೋತ್ಸವದ ಸಿದ್ಧತೆಗಳಿಗೆ ಚಾಲನೆ ನೀಡಲಾಯಿತು.
Last Updated : Feb 3, 2023, 8:20 PM IST