ಮಂಡ್ಯ: ನಿಮಿಷಾಂಭ ದೇಗುಲಕ್ಕೆ ನಟ ಶಿವರಾಜ್ ಕುಮಾರ್ ದಂಪತಿ ಭೇಟಿ.. ದೇವಿಗೆ ವಿಶೇಷ ಪೂಜೆ - ETV Bharat Kannada
🎬 Watch Now: Feature Video
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ನಿಮಿಷಾಂಭ ದೇವಾಲಯಕ್ಕೆ ಇಂದು ನಟ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಿಗೆ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಪ್ರಧಾನ ಅರ್ಚಕರು ಶಿವರಾಜ್ಕುಮಾರ್ ಮತ್ತು ಗೀತಾ ಅವರಿಗೆ ಶಾಲು ಹೊದಿಸಿ, ಹೂವಿನ ಮಾಲೆ ಹಾಕಿ ಆಶೀರ್ವದಿಸಿದರು. ಬಳಿಕ ದೇವಸ್ಥಾನದ ಮುಂದೆ ಶಿವರಾಜ್ಕುಮಾರ್ ಅವರು ತಮ್ಮ ಕಾರಿಗೆ ಪೂಜೆ ಮಾಡಿಸಿದರು. ಕಳೆದ ವಾರ ಇದೇ ದೇವಸ್ಥಾನಕ್ಕೆ ಗಂಧದಗುಡಿ ಸಿನಿಮಾ ಬಿಡುಗಡೆಯ ದಿನ ಅಶ್ವಿನಿ ಪುನೀತ್ ರಾಜಕುಮಾರ್ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದನ್ನು ಸ್ಮರಿಸಬಹುದು.
Last Updated : Feb 3, 2023, 8:31 PM IST