ವೈನ್ ಬಾಟಲ್ ಮುಟ್ಟಲು ನಿರಾಕರಿಸಿದ ನಟ ಪ್ರಭುದೇವ್.. - prabhudev denied mixing wine in cake
🎬 Watch Now: Feature Video
ಮೈಸೂರು: ನಗರದ ಸಂದೇಶ್ ದಿ ಪ್ರಿನ್ಸ್ ಹೋಟೆಲ್ನಲ್ಲಿ ಕ್ರಿಸ್ಮಸ್ ನಿಮಿತ್ತ ಕೇಕ್ ಮಿಕ್ಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಭುದೇವ್, ಕೇಕ್ ಮಿಕ್ಸಿಂಗ್ ಸಂದರ್ಭದಲ್ಲಿ ವೈನ್ ಬಾಟಲ್ ಮುಟ್ಟಲು ನಿರಾಕರಿಸಿದರು. ಕ್ರಿಸ್ಮಸ್ ನಿಮಿತ್ತ ಕಳೆದ 25 ವರ್ಷಗಳಿಂದ ಹೋಟೆಲ್ನಲ್ಲಿ ಕೇಕ್ ಮಿಕ್ಸಿಂಗ್ ಕಾರ್ಯಕ್ರಮವನ್ನು ಪ್ರಸಿದ್ಧ ನಟರಿಂದ ಮಾಡಿಸಿಕೊಂಡು ಬರುತ್ತಿದ್ದು, ಈ ಬಾರಿ ಕೇಕ್ ಮಿಕ್ಸಿಂಗ್ಗೆ ನಟ ಪ್ರಭುದೇವ ಆಗಮಿಸಿದ್ದು, ಕೇಕ್ ಮಿಕ್ಸಿಂಗ್ ಸಂದರ್ಭದಲ್ಲಿ ಹಣ್ಣುಗಳು, ಡ್ರೈ ಫ್ರೂಟ್ಸ್ ಸೇರಿದಂತೆ ವೈನ್ ಸಹ ಹಾಕಿ ಮಿಕ್ಸ್ ಮಾಡಲಾಗುತ್ತದೆ. ಈ ವೇಳೆ ಕೇಕ್ಗೆ ವೈನ್ ಹಾಕುವಂತೆ ಪ್ರಭುದೇವ್ಗೆ ವೈನ್ ಬಾಟಲನ್ನು ನೀಡಲು ಮುಂದಾದಾಗ, ನಾನು ವೈನ್ ಬಾಟಲ್ ಮುಟ್ಟುವುದಿಲ್ಲ ಎಂದು ನಟ ತಿರಸ್ಕರಿಸಿದರು.
Last Updated : Feb 3, 2023, 8:32 PM IST