ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಸ್ವರಾ ಭಾಸ್ಕರ್​- ಫಹಾದ್​ ಅಹ್ಮದ್ - ಫಹಾದ್​ ಅಹ್ಮದ್ ಮದುವೆ

🎬 Watch Now: Feature Video

thumbnail

By

Published : Mar 12, 2023, 6:26 PM IST

ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಮತ್ತು ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ನಾಯಕ ಫಹಾದ್​ ಅಹ್ಮದ್ ಇದೇ 2023ರ​ ಜನವರಿ 6 ರಂದು ವಿಶೇಷ ಕಾಯ್ದೆಯಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ನ್ಯಾಯಾಲಯದಲ್ಲಿ ವಿವಾಹ ಆಗಿರುವ ಈ ಜೋಡಿಯೀಗ ಅದ್ಧೂರಿ ವಿವಾಹ ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ನಟಿ ಸ್ವರಾ ಭಾಸ್ಕರ್​ ತಮ್ಮ ತಾಯಿಯ ಮನೆಯಲ್ಲಿ ಮದುವೆಯನ್ನು ಏರ್ಪಡಿಸಿದ್ದಾರೆ. ಸಾಂಪ್ರದಾಯಿಕ ವಿವಾಹಕ್ಕೆ ಎಲ್ಲಾ ರೀತಿಯ ತಯಾರಿ ನಡೆದಿದ್ದು, ವಿವಾಹ ಪೂರ್ವ ಶಾಸ್ತ್ರಗಳು ಬಹಳ ಸಂಭ್ರಮದಿಂದ ನಡೆಯುತ್ತಿವೆ. 

ಈಗಾಗಲೇ ಎರಡೂ ಕಡೆಯ ಕುಟುಂಬಸ್ಥರು ವಿವಾಹ ಪೂರ್ವ ಕಾರ್ಯಕ್ರಮಗಳಿಗೆ ರಾಷ್ಟ್ರ ರಾಜಧಾನಿಯ ಮದುವೆ ಸ್ಥಳಕ್ಕೆ ತಲುಪಿದ್ದಾರೆ. ಮದುವೆಯ ಕ್ಷಣಗಳನ್ನು ಸ್ವರಾ ಭಾಸ್ಕರ್​ ಮತ್ತು ಫಹಾದ್​ ಅಹ್ಮದ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಿನ್ನೆ ಸಂಜೆ, ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಳಿ ಉಡುಗೆಯಲ್ಲಿ ಇಬ್ಬರೂ ಸುಂದರವಾಗಿ ಕಾಣಿಸಿಕೊಂಡಿದ್ದು, ಕುಣಿದು ಕುಪ್ಪಳಿಸಿದ್ದಾರೆ. ಈ ಫೋಟೋ, ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇಂದು ಹರಿಶಿಣ ಶಾಸ್ತ್ರ ನಡೆಯುತ್ತಿದೆ.  

ಇದನ್ನೂ ಓದಿ: ಸ್ವರಾ ಫಹಾದ್​ ಅದ್ದೂರಿ ಮದುವೆಗೆ ಕ್ಷಣಗಣನೆ; ದೀಪಾಲಂಕೃತ ಮನೆ ಫೋಟೋ ಹಂಚಿಕೊಂಡ ನಟಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.