ಸಡಗರದಿಂದ ನಡೆದ ಐತಿಹಾಸಿಕ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ - etv bharat kannada
🎬 Watch Now: Feature Video
ವಿಜಯಪುರ:ಐತಿಹಾಸಿಕ ಸಂಕ್ರಮಣದ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಸಡಗರದಿಂದ ಧಾರ್ಮಿಕ ಭಕ್ತಿ ಭಾವಗಳೊಂದಿಗೆ ಇಂದು ನಡೆಯಿತು. ಸಿದ್ದೇಶ್ವರ ದೇವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಗರ್ಭಗುಡಿ ಪ್ರವೇಶಕ್ಕೂ ನಾನಾ ರೀತಿಯ ಹೂಗಳಿಂದ ಶೃಂಗರಿಸಲಾಗಿತ್ತು. ಸಂಕ್ರಾಂತಿಯ ಮುನ್ನಾದಿನ ನಡೆಯುವ ಈ ಭೋಗಿಯನ್ನು ಜಿಲ್ಲಾದ್ಯಂತ ಆಚರಿಸಿದರು. ಸಿದ್ದೇಶ್ವರ ಜಾತ್ರೆಯಲ್ಲಿ ಇಂದು ಶನಿವಾರ ಸಂಕ್ರಮಣದ ಮುನ್ನಾದಿನ ಆಚರಿಸುವ ಭೋಗಿ ಹಾಗೂ ಅಕ್ಷತಾರ್ಪಣೆ ಆಚರಿಸಲಾಯಿತು. ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ದಂಪತಿ ದೇವಸ್ಥಾನದಲ್ಲಿ ಯೋಗ ದಂಡಕ್ಕೆ ದಕ್ಷತೆ ಹಾಕಿ ಸರಳವಾಗಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯಲ್ಲಿ ಭೋಗಿ ಕಾರ್ಯಕ್ರಮ ನೇರವೇರಿಸಲಾಯಿತು.
ಇದನ್ನು ಓದಿ:ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅಚ್ಚರಿ ಮೂಡಿಸಿದ ಶ್ವಾನ