ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಿಚ್ಚ ಸುದೀಪ್ ಭರ್ಜರಿ ಮತ ಬೇಟೆ

By

Published : Apr 28, 2023, 4:35 PM IST

Updated : Apr 28, 2023, 6:42 PM IST

thumbnail

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಟ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ‌ ನಡೆಸಿದರು. ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರವಾಗಿ ಮತ ಬೇಟೆ ನಡೆಸಿದರು. ದೇವಾಂಗಪೇಟೆಯಿಂದ ಬೆಂಗೇರಿಯ ಕಲ್ಮೇಶರ ದೇವಸ್ಥಾನದವರೆಗೆ ನಡೆದ ರೋಡ್​ ಶೋದಲ್ಲಿ ಕಿಚ್ಚ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಕಿಕ್ಕಿರಿದು ಸೇರಿದ್ದು ಕಂಡಬಂತು.

ಇದನ್ನೂ ಓದಿ: ಗೀತಾ ಕಾಂಗ್ರೆಸ್ ಸೇರ್ಪಡೆ: ಶಿವರಾಜ್​ಕುಮಾರ್ ಕೂಡ ಪ್ರಚಾರಕ್ಕೆ ಬರುತ್ತಾರೆ - ಗೀತಾ ಶಿವರಾಜ್​ಕುಮಾರ್

ಸುದೀಪ್​ ನೋಡಲು ಅಭಿಮಾನಿಗಳು ಮಹಡಿಯ ಮೇಲೆ ಹತ್ತಿದ್ದರು. ಕಿಚ್ಚ ಸುದೀಪ್​ ಮೇಲೆ ಹೂವಿನ ಮಳೆ ಗರಿದರು. ಬಿಜೆಪಿ ಹಾಗೂ ಕಿಚ್ಚ ಪರ ಘೋಷಣೆ ಕೂಗಿದರು. ರೋಡ್ ಶೋದಲ್ಲಿ ಕಾರ್ಯಕರ್ತರಿಗೆ ಕೈ ಬಿಸಿದ ಸುದೀಪ್, ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿಗೆ ಮತ ನೀಡುವಂತೆ ಮನವಿ ಮಾಡಿದರು. ಕಾಂಗ್ರೆಸ್ ನಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಹೇಶ ಟೆಂಗಿನಕಾಯಿ ಮುಖಾಮುಖಿಯಾಗಿದ್ದು‌ ಕ್ಷೇತ್ರದಲ್ಲಿ ತೀವ್ರ ಹಣಾಹಣಿಯುಂಟಾಗಿದೆ.

ಬಳಿಕ ಧಾರವಾಡ ಗ್ರಾಮೀಣ ಕ್ಷೇತ್ರದ ಅಮ್ಮಿನಭಾವಿ ಗ್ರಾಮದಲ್ಲಿ ಬಿಜೆಪಿ‌ ಹಾಲಿ‌ ಶಾಸಕ ಅಮೃತ ದೇಸಾಯಿ ಪರ ಕಿಚ್ಚ ಸುದೀಪ ಭರ್ಜರಿ ಪ್ರಚಾರ ನಡೆಸಿದರು. ಗ್ರಾಮದ ಹೊರವಲಯದಿಂದ ಆರಂಭವಾದ ರೋಡ್ ಶೋ ಸವದತ್ತಿ ಮಾರ್ಗವಾಗಿ ಸಂಚರಿಸಿತು. ಮಾರ್ಗದುದ್ದಕ್ಕೂ ಜಮಾವಣೆಗೊಂಡಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬಿಜೆಪಿ ಪರವಾಗಿ ಘೋಷಣೆ ಕೂಗಿದರು. ಇದಕ್ಕೂ ಮುನ್ನ ಕಲಘಟಗಿ ಕ್ಷೇತ್ರದ ಅಳ್ನಾವರ ಪಟ್ಟಣದಲ್ಲಿ ನಾಗರಾಜ ಛೆಬ್ಬಿ ಪರ ಮತಯಾಚಿಸಿದರು.   

Last Updated : Apr 28, 2023, 6:42 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.