ನಟ ಪುನೀತ್ ರಾಜಕುಮಾರ ಜನ್ಮದಿನ, ಅಪ್ಪು ನೆನೆದ ಹಿರಿಯ ನಟ ಸುರೇಶ ಹೆಬ್ಳೀಕರ್.. - ಪುನೀತ್ ಗೆ ನಟನೆ ರಕ್ತಗತ
🎬 Watch Now: Feature Video
ಧಾರವಾಡ: ನಟ ಪುನೀತ್ ರಾಜಕುಮಾರ ಜನ್ಮದಿನ ಹಿನ್ನೆಲೆ ಪುನೀತ್ ಅವರನ್ನು ಹಿರಿಯ ನಟ ಸುರೇಶ ಹೆಬ್ಳೀಕರ್ ಇಂದು ಸ್ಮರಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜಕುಮಾರ ಒಳ್ಳೆಯ ನಟ ಅದರಲ್ಲಿ ಸಂಶಯನೇ ಇಲ್ಲ. ಹಿಂದೆ ಪುನೀತ್ ಒಂದು ವೇದಿಕೆಯಲ್ಲಿ ಮಾತನಾಡುವಾಗ ಸುರೇಶ ಹೆಬ್ಳೀಕರ್ ಪರಿಸರದ ಬಗ್ಗೆ ಒಳ್ಳೆಯ ಕೆಲಸ ಮಾಡುತಿದ್ದಾರೆ ಎಂದಿದ್ದನ್ನು ನೆನಪಿಸಿಕೊಂಡರು.
ಅವರೊಬ್ಬ ಒಳ್ಳೆಯ ನಟ ಒಳ್ಳೆ ಮನುಷ್ಯ ಬಹಳಷ್ಟು ಶಾಲೆಗಳಿಗೆ ಹಾಗೂ ಹಲವು ಕಡೆ ಸಹಾಯ ಮಾಡ್ತಿದ್ರು. ನಾನೂ ಕೂಡಾ ಈ ಬಗ್ಗೆ ಕೆಲವು ಪುಸ್ತಕದಲ್ಲಿ ಬರೆದಿದ್ದೇನೆ ರಾಜಕುಮಾರ ಒಬ್ಬ ಪ್ರತಿಭಾವಂತ ಕಲಾವಿದ, ಮೇರು ನಟ ಅವರ ಮಗ ಪುನೀತ್ ಗೆ ನಟನೆ ರಕ್ತಗತವಾಗಿ ಬಂದಿದೆ ಎಂದು ಹೇಳಿದರು.
ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ್ ಹಾಗೂ ಬಾಲೆಖಾನ ಅವರನ್ನ ನೆನಪಿಸಿಕೊಳ್ತೇವೆ, ಅದೇ ರೀತಿ ನಟನೆಯಲ್ಲಿ ಪುನೀತ್ ಪ್ರತಿಭಾವಂತ, ಇವತ್ತು ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಇದನ್ನು ಗ್ರಹಿಸಿ ಒಳ್ಳೆಯ ಚಿತ್ರಗಳನ್ನು ಮಾಡಬೇಕು. ಹಿಂದೆ ಕೇವಲ ಸಾಹಿತ್ಯ ಹಾಗೂ ಪುಸ್ತಕದ ಮೇಲೆ ಚಿತ್ರಕಥೆ ಬರೆಯುತಿದ್ದರು. ಆ ವೇಳೆ ಒಳ್ಳೆ ಗೀತೆ ಬರೆದಿದ್ರು, ಒಳ್ಳೆ ಚಿತ್ರ ಜನರಿಗೆ ಕೊಡಬೇಕು ಎಂದರು.