ಹೊಟ್ಟೆನೋವು ತಾಳಲಾರದೆ ಒದ್ದಾಡಿದ ವ್ಯಕ್ತಿಯ ವಿಡಿಯೋ ವೈರಲ್: ಜಿಲ್ಲಾಧಿಕಾರಿ ಸ್ಙಷ್ಟನೆ - Video viral of A person who suffering a stomach ache
🎬 Watch Now: Feature Video
ನಿನ್ನೆ ರಾತ್ರಿ ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಹೊಟ್ಟೆ ನೋವು ತಾಳಲಾರದೆ ಸಂಕಟ ಅನುಭವಿಸುತ್ತಿದ್ದ ಯುವಕನೊಬ್ಬನ ದೃಶ್ಯಗಳನ್ನು ಯಾರೋ ಅಪರಿಚಿತರು ಸರೆ ಹಿಡಿದು, ಕೊರೊನಾದಿಂದ ಬಳಲುತ್ತಿರುವ ಯುವಕ ಎಂಬ ಸುಳ್ಳು ಮಾಹಿತಿಯೊಂದಿಗೆ ವಿಡಿಯೋ ತುಣುಕನ್ನು ಹರಿಬಿಟ್ಟಿದ್ದರು. ಈ ಕುರಿತು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಪಷ್ಟನೆ ನೀಡಿದ್ದು, ಈ ವಿಡಿಯೋ ಯಾವುದೇ ರೀತಿಯಲ್ಲಿ ಕೊರೊನಾಗೆ ಸಂಬಂಧಪಟ್ಟಿಲ್ಲ. ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ವಿಡಿಯೋವನ್ನು ಉಪನಗರ ಠಾಣೆ ಪೊಲೀಸ್ ಪೇದೆಯೊಬ್ಬರು ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.