ನಿಲ್ತಾನೇ ಇಲ್ವಲ್ರೀ,, ಹಾಸನದಲ್ಲಿ ತುಂತುರು ಮಳೆ.. ದೈನಂದಿನ ಕೆಲಸಗಳಿಗೆ ಕಿರಿಕಿರಿ.. - ಜಿಟಿ-ಜಿಟಿ ಮಳೆ
🎬 Watch Now: Feature Video
ಹಾಸನ:ಜಿಲ್ಲೆಯಲ್ಲಿ ಬೆಳಗ್ಗೆಯಿಂ ಜಿಟಿ-ಜಿಟಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಿನ ನಿತ್ಯದ ಕೆಲಸಗಳಿಗೂ ವರುಣ ಕಿರಿಕಿರಿ ಉಂಟು ಮಾಡುತ್ತಿದ್ದಾನೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ತುಂತುರು ಮಳೆಯಾಗುತ್ತಿದೆ. ಈಗಾಗಲೇ ಅಗಸ್ಟ್‌ನಲ್ಲಿ ಸುರಿದ ಮಹಾಮಳೆಗೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಆಲೂಗಡ್ಡೆ, ಜೋಳ ಹಾಗೂ ರಾಗಿ ಬೆಳೆ ನಾಶವಾಗಿವೆ. ಎಡಬಿಡದೆ ಮಳೆ ಆಗುತ್ತಿರುವುದರಿಂದ ತರಕಾರಿಗಳೂ ಕೊಳೆಯುತ್ತಿದ್ದು, ಬೆಲೆಯೂ ಗಗನಕ್ಕೇರಿದೆ.