ಜನತಾ ಕರ್ಫ್ಯೂ ಹಿನ್ನೆಲೆ ಅವಶ್ಯಕ ಸೇವೆಗಳು ಮಾತ್ರ ಲಭ್ಯ: ರಾಯಚೂರು ಡಿಸಿ - DC R. Venkatesh Kumar statement
🎬 Watch Now: Feature Video
ಅವಶ್ಯಕ ವಸ್ತುಗಳ ಸಾಗಣಿಕೆ ಹೊರತುಪಡಿಸಿ ಉಳಿದಂತೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ತುರ್ತು ಸೇವೆಗಳ ಅವಶ್ಯಕತೆ ಇದ್ದರೆ ಮಾತ್ರ ಜನರು ಹೊರ ಬನ್ನಿ. ಉಳಿದಂತೆ ಯಾರೂ ಕೂಡ ಮನೆಯಿಂದ ಹೊರ ಬರಬೇಡಿ ಎಂದು ಸೂಚನೆ ನೀಡಿದ್ದಾರೆ.