ಸಮಾನ ನಾಗರಿಕ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿ ಪ್ರತಿಭಟನೆ - ಸಮಾನ ನಾಗರಿಕ ಕಾಯ್ದೆಯನ್ನು ಜಾರಿಗೆ
🎬 Watch Now: Feature Video

ಸಮಾನ ನಾಗರಿಕ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಶಿವಮೊಗ್ಗದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಜನಸಂಖ್ಯೆ ನಿಯಂತ್ರಣಕ್ಕೆ ದೇಶಾದ್ಯಂತ ಸಮಾನ ನಾಗರಿಕ ಕಾನೂನು ಜಾರಿಗೆ ತರಬೇಕಿದೆ. ಜೊತೆಗೆ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಸಹ ನಿಯಂತ್ರಣ ಮಾಡಬೇಕಾಗಿದೆ. ಹಾಗೂ ಆಂಧ್ರಪ್ರದೇಶ ಸರ್ಕಾರ ಅಲ್ಲಿನ ದೇವಾಲಯಗಳ ಭೂಪ್ರದೇಶವನ್ನು ಅಲ್ಪಸಂಖ್ಯಾತರ ಕಾರ್ಯಕ್ರಮಗಳಿಗೆ ಉದಾರವಾಗಿ ನೀಡುತ್ತಿರುವುದು ಹಾಗೂ ಹಿಂದೂ ದೇವಾಲಯಗಳ ಹಣವನ್ನು ಅಲ್ಪಸಂಖ್ಯಾತರ ಕಾರ್ಯಕ್ರಮಗಳಿಗೆ ನೀಡುತ್ತಿರುವುದು ಖಂಡನೀಯ. ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ಸಾವರ್ಕರ್ ಪ್ರತಿಮೆಗೆ ಎನ್ಯುಎಸ್ಐ ನ ಕಾರ್ಯಕರ್ತರು ಮಸಿ ಬಳಿದಿರುವುದು ತಪ್ಪು. ಹಾಗಾಗಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.