ಮೈಸೂರು ವಿವಿಯಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಜಿ.ಹೇಮಂತ್ ಕುಮಾರ್
🎬 Watch Now: Feature Video
ಮೈಸೂರು: ವಿವಿಯಲ್ಲಿ ಪ್ರತಿ ವರ್ಷ 3,000 ಸಾವಿರ ವಿದ್ಯಾರ್ಥಿಗಳು ಪದವಿ ಪಡೆದು ಹೋಗುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಪದವಿಯ ಜೊತೆ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವ ಕೆಲವು ಕಾರ್ಯಕ್ರಮಗಳನ್ನು ಸಹ ಇಲ್ಲಿ ನಡೆಸಲಾಗುತ್ತಿದೆ. ಜೊತೆಗೆ ಮೈಸೂರು ವಿವಿಯಲ್ಲಿ 2019ರಿಂದ ಕರಿಯರ್ ಹಬ್ಅನ್ನು ರೂಸಾದಡಿ ಆರಂಭಿಸಲಾಗಿದೆ. ಹೊಸ ಶಿಕ್ಷಣ ನೀತಿ ಜಾರಿಗೆ ಪ್ರಯತ್ನ, ಹೊಸ ತಾಂತ್ರಿಕ ಕೋರ್ಸ್ಗಳ ಆರಂಭ, 40 ವಿದೇಶಿ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಡಂಬಡಿಕೆ ಹಾಗೂ 140 ಹೆಚ್ಚು ಸೆಮಿನಾರ್ಗಳನ್ನು ಕೋವಿಡ್ ಸಮಯದಲ್ಲಿ ನಡೆಸಲಾಯಿತು. ಜೊತೆಗೆ ಹಲವಾರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೈಸೂರು ವಿವಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಈಟಿವಿ ಭಾರತದೊಂದಿಗೆ ನಡೆಸಿದ ಸಂದರ್ಶನದಲ್ಲಿ ತಿಳಿಸಿದರು.