ಸಿಎಂ ರಾಜ್ಯದಲ್ಲಿ ಇಲ್ಲ ಅಂದ್ರೆ...ಸಚಿವರು ವಿಧಾನಸೌಧದಲ್ಲಿ ಕಾಣುವುದೇ ಇಲ್ಲ…! - karnataka cm of trip
🎬 Watch Now: Feature Video
ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸಕ್ಕೆ ತೆರಳಿದ ಮೇಲೆ ಸಚಿವರು ವಿಧಾನಸೌಧಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್, ವಿ.ಸೋಮಣ್ಣ, ಕೆ.ಎಸ್.ಈಶ್ವರಪ್ಪ, ಡಿಸಿಎಂ ಗೋವಿಂದ ಎಂ. ಕಾರಚೋಳ, ಡಾ.ಅಶ್ವಥನಾರಾಯಣ ಸೇರಿದಂತೆ ಕೆಲವೇ ಮಂದಿ ಸಚಿವರು ಆಗಾಗ ವಿಧಾನಸೌಧದಲ್ಲಿ ಕಾಣಿಸಿಕೊಳ್ಳುತ್ತಾರೆ. ಸಚಿವರಾದ ಸಿ.ಟಿ. ರವಿ ಹಾಗೂ ಶ್ರೀರಾಮಲು ಪ್ರವಾಸದಲ್ಲಿದ್ದಾರೆ. ವಿಧಾನಸೌಧದಲ್ಲಿ ಸಚಿವರಿದ್ದಾಗ ಮಾತ್ರ ಜನಜಂಗುಳಿ ಇರುತ್ತದೆ. ಉಳಿದಂತೆ ಅಧಿಕಾರಿಗಳು, ಸಿಬ್ಬಂದಿ ಹೊರತುಪಡಿಸಿದರೆ ವಿಧಾನಸೌಧ ಮತ್ತು ವಿಕಾಸಸೌಧ ಖಾಲಿ, ಖಾಲಿಯಾಗಿದೆ. ಬಹುತೇಕ ಸಚಿವರು ವಿಧಾನಸೌಧಕ್ಕೆ ಬರಲು ಮೀನಮೇಷ ಎಣಿಸುತ್ತಿರುವುದೇಕೆ?, ಸಚಿವ ಸಂಪುಟ ಸಭೆಗೆ ಮಾತ್ರ ಸಚಿವರು ಸೀಮಿತರಾದರೇ? ಎಂಬ ಪ್ರಶ್ನೆಯೂ ಮೂಡಿದೆ.ಅದರ ಕುರಿತ ವಿಡಿಯೋ ಇಲ್ಲಿ ನೋಡಿ.....