ಕರೋನಾ ವೈರಸ್ ಆತಂಕದಲ್ಲೂ ಜಾತ್ರೆ ನಡೆಸಿದ ಚಿಕ್ಕೋಡಿನ ಜನತೆ.. - ಕರೋನಾ ವೈರಸ್ ಆತಂಕದಲ್ಲೂ ಜಾತ್ರೆ ನಡೆಸಿದ ಚಿಕ್ಕೋಡಿನ ಜನತೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6413719-thumbnail-3x2-net.jpg)
ಚಿಕ್ಕೋಡಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರ ಯಾವುದೇ ಸಭೆ ಸಮಾರಂಭ ಜಾತ್ರೆ ನಡೆಸದಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶದ ನಡುವೆಯೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮ ಲಕ್ಷ್ಮೀ ಜಾತ್ರೆಯನ್ನು ಆಚರಿಸಲಾಗಿದೆ. ಜಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದು, ಮಾಸ್ಕ್ ಕೂಡ ಧರಿಸಿರಲಿಲ್ಲ. ಈ ಬಗ್ಗೆ ತಾಲೂಕು ಆಡಳಿತವಾಗಲಿ ಆರೋಗ್ಯ ಇಲಾಖೆಯಾಗಲಿ ಯಾವುದೇ ಕ್ರಮ ಮಾತ್ರ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಆಯೋಜಕರನ್ನ ಕೇಳಿದ್ರೆ, ಸರ್ಕಾರದ ಆದೇಶ ಗೊತ್ತಿದೆ. ಆದರೆ, ಜಾತ್ರೆಯನ್ನ ನಿಲ್ಲಿಸಲು ಆಗಲ್ಲ, ಬದಲಾಗಿ ಜನ ಕಮ್ಮಿ ಸೇರುವ ಹಾಗೆ ನೋಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.