ದೇವಾಲಯಕ್ಕೂ ತಟ್ಟಿದ ಕೊರೊನಾ ಎಫೆಕ್ಟ್.. ಇಂದಿನಿಂದ ಕುಕ್ಕೆ ಸುಬ್ರಹ್ಮಣ್ಯ ದರ್ಶನ ಬಂದ್! - ಇಂದಿನ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಬಂದ್
🎬 Watch Now: Feature Video
ದಕ್ಷಿಣಕನ್ನಡ: ಕೊರೊನಾ ವೈರಸ್ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವ ಸಲುವಾಗಿ ಇಂದಿನಿಂದ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಬಂದ್ ಮಾಡಲಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ದೇವಸ್ಥಾನದ ಆಡಳಿತ ಮಂಡಳಿ ಈ ಸೂಚನೆ ಹೊರಡಿಸಿದೆ. ದೇವರ ದರ್ಶನ, ಸೇವೆ, ಅನ್ನದಾನ, ವಸತಿ ವ್ಯವಸ್ಥೆ ಎಲ್ಲವೂ ಬಂದ್ ಮಾಡಲಾಗಿದೆ. ಕ್ಷೇತ್ರದ ಅರ್ಚಕರಿಂದ ಮಾತ್ರ ನಿತ್ಯ ವಿಧಿಯಂತೆ ದೇವರಿಗೆ ಪೂಜೆ ನಡೆಯಲಿದೆ. ಸುಬ್ರಹ್ಮಣ್ಯ ಪೇಟೆಯೂ ಬಹುತೇಕ ಬಂದ್ ಆಗಿದ್ದು, ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.