ಪುಂಡರಿಗೆ ಅನೈತಿಕ ಚಟುವಟಿಕೆಗಳ ತಾಣವಾಯ್ತು ಈ ಸರ್ಕಾರಿ ಶಾಲೆ - ಘೋಡಗೇರಿ ಗ್ರಾಮದ ಸರ್ಕಾರಿ ಉರ್ದು ಶಾಲೆ
🎬 Watch Now: Feature Video
ಶಾಲೆಗಳನ್ನು ದೇಗುಲಗಳಿಗೆ ಹೋಲಿಸೋದುಂಟು. ದೇಶದ ಭವಿಷ್ಯ ಶಾಲಾ ಕೊಠಡಿಗಳಲ್ಲಿರುತ್ತದೆ ಅಂದ್ರೆ ತಪ್ಪಾಗಲ್ಲ. ಮಕ್ಕಳನ್ನು ತಿದ್ದಿ ತೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಹೊತ್ತ ಶಾಲೆಗಳಲ್ಲಿ ಕಲಿಯುವ ವಾತಾವರಣವಿರಬೇಕು. ಶಾಲೆಗಳನ್ನು ಶುಚಿಯಾಗಿಡೋದು ಎಲ್ಲರ ಕರ್ತವ್ಯ. ಆದರೆ ಪುಂಡರ ಹಾವಳಿಯಿಂದ ಇಲ್ಲೊಂದು ಸರ್ಕಾರಿ ಶಾಲೆ ಅವ್ಯವಸ್ಥೆಯ ಗೂಡಾಗಿದೆ.