ಗಾಳಿ, ಮಳೆಗೆ ತತ್ತರಿಸಿದ ಮಲೆನಾಡು: ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರ ಆಗ್ರಹ - undefined

🎬 Watch Now: Feature Video

thumbnail

By

Published : Apr 29, 2019, 7:38 AM IST

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಶಕುನವಳ್ಳಿ, ಶಂಕರಿಕೊಪ್ಪದಲ್ಲಿ ಬಿರುಗಾಳಿ ಸಮೇತ ಮಳೆಯಾಗಿದ್ದು, ಸಾಕಷ್ಟು ಹಾನಿಯಾಗಿದೆ. ನಿನ್ನೆ ಸಂಜೆ ಬಂದ ಗಾಳಿ- ಮಳೆಗೆ ತೆಂಗಿನಮರ, ಮಾವಿನ‌ಮರ ಮುರಿದು ಬಿದ್ದಿವೆ. ಜೋರಾದ ಗಾಳಿಗೆ ವಿದ್ಯುತ್ ಕಂಬವೊಂದು ಮನೆಯ ಮೇಲೆ ಬಿದ್ದಿದ್ದು, ಗ್ರಾಮದ ವಿಶ್ವನಾಥ್ ನಾಡಿಗೇರ್ ಎಂಬುವರ ಮನೆಯ ಶೀಟ್​ಗಳು ಹಾರಿ ಹೋಗಿವೆ. ಕೆಲವೊಂದು ಶೀಟ್​ಗಳು ಕಾರಿನ ಮೇಲೆ ಬಿದ್ದು ಕಾರು ಸಹ ನಜ್ಜುಗುಜ್ಜಾಗಿದೆ. ವಿಪರೀತ ಗಾಳಿ, ಮಳೆಗೆ ಗ್ರಾಮದಲ್ಲಿ ಸಾಕಷ್ಟು ಹಾನಿ ಉಂಟಾಗಿದ್ದು, ಕಂದಾಯ ಇಲಾಖೆ ತಕ್ಷಣ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.