ದೇವಾಲಯದಲ್ಲಿ ಮಂಜುನಾಥ್ - ವಿಶ್ವನಾಥ್ ಮುಖಾಮುಖಿ.. VIDEO - ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ
🎬 Watch Now: Feature Video
ಮೈಸೂರು: ಹುಣಸೂರು ವಿಧಾನಸಭಾ ಉಪಚುನಾವಣೆಯ ಬದ್ಧ ವೈರಿಗಳಂತೆ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ ಮಂಜುನಾಥ್ ಹಾಗೂ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಇಬ್ಬರು ಇಂದು ದೇವಾಲಯದಲ್ಲಿ ಎದುರು ಬದುರಾದರು. ಹುಣಸೂರು ಪಟ್ಟಣದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಎಚ್.ಮಂಜುನಾಥ್ ಅವರು ತಮ್ಮ ಮಗಳೊಂದಿಗೆ ಆಗಮಿಸಿದರು. ನಂತರ ಎಚ್.ವಿಶ್ವನಾಥ್ ಆಗಮಿಸಿದರು. ಇಬ್ಬರು ದೇವರಿಗೆ ಪೂಜೆ ಸಲ್ಲಿಸಿ, ಒಬ್ಬರ ಮುಖ ಮತ್ತೊಬ್ಬರು ನೋಡದೇ ತೆರಳಿದರು. ಉಪಚುನಾವಣೆ ಅಖಾಡದಲ್ಲಿರುವ ಪ್ರಬಲ ಅಭ್ಯರ್ಥಿಗಳಾದ ಇವರಿಬ್ಬರು ಗೆಲುವಿಗಾಗಿ ಮತದಾನದ ದಿನವೂ ಟೆಂಪಲ್ ರನ್ ಜೋರಾಗಿಯೇ ನಡೆಸಿದ್ದಾರೆ.