ಸರ್ಕಾರಿ ಗೋಮಾಳದ ಹುಲ್ಲುಗಾವಲಿಗೆ ಬೆಂಕಿಯಿಟ್ಟ ದುರುಳರು... ಜಾನುವಾರುಗಳ ಮೇವು ಸುಟ್ಟು ಭಸ್ಮ - ನೆಲಮಂಗಲದ ಸರ್ಕಾರಿ ಗೋಮಾಳ
🎬 Watch Now: Feature Video

ನೆಲಮಂಗಲ: ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಸರ್ಕಾರಿ ಗೋಮಾಳದಲ್ಲಿನ ಹುಲ್ಲುಗಾವಲಿಗೆ ಬೆಂಕಿ ಬಿದ್ದು ಸುಮಾರು 20 ಎಕರೆಯ ಹುಲ್ಲು ಸುಟ್ಟು ಭಸ್ಮವಾಗಿದೆ. ನೆಲಮಂಗಲ ತಾಲೂಕಿನ ಬೈರಶೆಟ್ಟಹಳ್ಳಿ ಗ್ರಾಮದ ಬಳಿ ದುರುಳರು ಈ ಅಟ್ಟಹಾಸ ಮೆರೆದಿದ್ದಾರೆ. ಬೇಸಿಗೆಯಲ್ಲಿ ದನಕರುಗಳಿಗೆ ಆಹಾರವಾಗಬೇಕಿದ್ದ ಹುಲ್ಲು ಸುಟ್ಟು ಕರಕಲಾಗಿದೆ. ದಿನನಿತ್ಯ ಹತ್ತಾರು ಜಾನುವಾರಗಳು ಈ ಪ್ರದೇಶದಲ್ಲಿ ಮೇಯುತ್ತಿದ್ದವು. ಬೆಂಕಿಯ ಕೆನ್ನಾಲಿಗೆಗೆ ಮೇಯುತ್ತಿದ್ದ ಹಸುಗಳು ಸ್ಥಳದಿಂದ ಪರಾರಿಯಾಗಿವೆ. ಘಟನೆಯ ನಂತರ ಸ್ಥಳಕ್ಕೆ ನೆಲಮಂಗಲ ಅಗ್ನಿಶಾಮಕ ದಳ ಹಾಗೂ ಗ್ರಾಮಾಂತರ ಪೊಲೀಸರು ಬಂದಿಲ್ಲವೆಂದು ಗ್ರಾಮಸ್ಥರು ಸಿಡಿಮಿಡಿಗೊಂಡರು.