ಡಾ. ಜಿ.ಪರಮೇಶ್ವರ್ಗೆ ಸಿಎಂ ಸ್ಥಾನ ನೀಡಬೇಕು: ತುಮಕೂರು ಕಾಂಗ್ರೆಸ್ ಮುಖಂಡರ ಒಕ್ಕೊರಲ ಆಗ್ರಹ..! - ಮುಖ್ಯಮಂತ್ರಿ ಹುದ್ದೆ
🎬 Watch Now: Feature Video
ತುಮಕೂರು: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಉತ್ತುಂಗಕ್ಕೇರಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೆಸರು ಚಾಲ್ತಿಯಲ್ಲಿತ್ತು, ಅದ್ರೆ ಇದೀಗ ಡಾ. ಜಿ. ಪರಮೇಶ್ವರ್ ಅವರು ಸಿಎಂ ಆಗಬೇಕೆಂಬ ಕೂಗು ಜಿಲ್ಲೆಯಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದೆ. ಈ ಹಿಂದೆ ಕೂದಲೆಳೆ ಅಂತರದಲ್ಲಿ ಮುಖ್ಯಮಂತ್ರಿ ಹುದ್ದೆ ಕೈ ತಪ್ಪಿ ಹೋಗಿತ್ತು. ಕೆಲ ಕುತಂತ್ರಗಳಿಂದ ಪರಮೇಶ್ವರ್ ಅವರಿಗೆ ಅನ್ಯಾಯವಾಗಿತ್ತು. ಹೀಗಾಗಿ ಮುಂದೆ ಪರಮೇಶ್ವರ್ ಅವರಿಗೆ ನ್ಯಾಯಯುತವಾಗಿ ಮುಖ್ಯಮಂತ್ರಿ ಹುದ್ದೆ ದೊರೆಯಬೇಕಿದೆ ಎಂಬುದು ಜಿಲ್ಲೆಯ ಕಾಂಗ್ರೆಸ್ ಮುಖಂಡರ ಆಗ್ರಹವಾಗಿದೆ.