ಕೋವಿಡ್ ನಿಯಂತ್ರಣಕ್ಕಾಗಿಯೇ ಜಿಲ್ಲಾ ಉಸ್ತುವಾರಿಗಳನ್ನ ಬದಲಾಯಿಸಲಾಗಿದೆ: ಸಚಿವ ಶ್ರೀರಾಮುಲು - ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮಲು
🎬 Watch Now: Feature Video

ಬಾಗಲಕೋಟೆ: ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದ ಖಾಸಗಿ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮಲು, ಕೋವಿಡ್ 2ನೇ ಅಲೆ ಶುರುವಾಗಿದೆ. ಆರೋಗ್ಯ ಸಚಿವ ಸುಧಾಕರ್ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರ ವಿರಮಿಸದೆ ಅವಿರತವಾಗಿ ಶ್ರಮಿಸುತ್ತಿದೆ ಎಂದರು. ಇದೇ ಸಮಯದಲ್ಲಿ ಉಸ್ತುವಾರಿಗಳ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮೊನ್ನೆ ಉಸ್ತುವಾರಿ ಸಚಿವರನ್ನು ಸಿಎಂ ಬದಲಾವಣೆ ಮಾಡಿದ್ದು, ಕೋವಿಡ್ ನಿಯಂತ್ರಣಕ್ಕಾಗಿಯೇ ಹೊರತು ಯಾವುದೇ ರಾಜಕೀಯಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.